Wednesday, July 2, 2025
spot_imgspot_img
spot_imgspot_img

ಚಂದ್ರನ ಮೇಲ್ಮೈ ಮೇಲೆ ನೀರು ಪತ್ತೆ -ನಾಸಾ ಅಧ್ಯಯನ

- Advertisement -
- Advertisement -

ಅಮೆರಿಕ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಾಸಾ ವಿಜ್ಞಾನಿಗಳು ಮೊದಲ ಬಾರಿಗೆ ಚಂದ್ರನ ಮೇಲೆ ಬೆಳಕು ಬೀಳುವ ಪ್ರದೇಶದಲ್ಲಿ ನೀರು ಇರುವುದನ್ನು ಪತ್ತೆ ಮಾಡಿದ್ದಾರೆ. ಸೋಫಿಯಾ ಟೆಲಿಸ್ಕೋಪ್ ಮೂಲಕ ಚಂದ್ರನ ಮೇಲ್ಮೈ ನಲ್ಲಿ ನೀರಿನ ಕುರುಹು ಇರುವುದು ಪತ್ತೆಯಾಗಿದೆ ಎಂದಿದ್ದಾರೆ.

ದಶಕಗಳ‌ ಹಿಂದೆ ಚಂದ್ರನ ಮೇಲ್ಮೈ ಸಂಪೂರ್ಣ ಶುಷ್ಕವಾಗಿದೆ ಎನ್ನಲಾಗಿತ್ತು ಆದರೆ ಈಗ ಅಧ್ಯಯನ ನಡೆಸಿದ ವಿಜ್ಞಾನಿಗಳು ಅಂದುಕೊಂಡ ಮಟ್ಟಕ್ಕಿಂತ ಹೆಚ್ಚು ನೀರು ಅಲ್ಲಿ ಇರಬಹುದು ಎಂದಿದ್ದಾರೆ.ಅಲ್ಲದೆ ಚಂದ್ರನ ಮೇಲೆ ಹೆಚ್ಚಿನ ಪ್ರಮಾಣದ ನೀರು ಇದ್ದರೆ ಮಾನವನ ಅನ್ವೇಷಣೆಗೆ, ಕುಡಿಯುವ ನೀರಿಗಾಗಿ ಅಥವಾ ರಾಕೇಟ್ ಇಂಧನವಾಗಿ ಬಳಸಬಹುದು ಎಂದು ಹೇಳಿದ್ದಾರೆ.

ಚಂದ್ರನ ಮೇಲಿನ ನೀರು ಗಾಜಿನ ಮಣಿ ಅಥವಾ ಚಂದ್ರನ ಕಠಿಣ ವಾತಾವರಣದಿಂದ ರಕ್ಷಿಸುವ ಮತ್ತೊಂದು ವಸ್ತುವಿನಲ್ಲಿರಬಹುದು ಅದನ್ನು ಅಧ್ಯಯನ ಮಾಡುವುದರಿಂದ ಚಂದ್ರನ ಮೇಲ್ಮೈ ಗೆ ನೀರು‌ ಹೇಗೆ ಬಂತು ಎನ್ನುವುದನ್ನು ಪತ್ತೆ ಮಾಡಬಹುದು ಎಂದಿದ್ದಾರೆ.


- Advertisement -

Related news

error: Content is protected !!