- Advertisement -
- Advertisement -

ವಿಟ್ಲ ಪೊಲೀಸ್ ಠಾಣಾ ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ಸುರಕ್ಷಾ ಸಲಹೆಗಳ ಸುತ್ತೋಲೆಯೊಂದನ್ನು ಪ್ರಕಟಿಸಿದೆ. ಮನೆಯಲ್ಲಿರುವಾಗ ಪಾಲಿಸಬೇಕಾದ ಕೆಲವು ಸಲಹೆಗಳು ಈ ಕೆಳಗಿನಂತಿದೆ
- ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದನ್ನು ಮರೆಯಬೇಡಿ
- ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡಿ
- ಆದಷ್ಟು ಮುಂಬಾಗಿಲು ಮತ್ತು ಹಿಂಬಾಗಿಲುಗಳಿಗೆ ಕಂಪ್ಯೂಟರೈಸ್ಡ್ ಲಾಕ್ಗಳನ್ನು ಅಳವಡಿಸಲು ಪ್ರಯತ್ನಿಸಿ .
- ಮನೆಯ ಬಾಗಿಲು ತಟ್ಟಿದಾಗ ,ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸಿ.
- ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು
- ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ
- ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೊವೃದ್ದರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ
- .ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.
- ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡುವುದು ತಪ್ಪಿಸಿ
- ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು ಉತ್ತಮ.
- ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಾಗ್ರಿಗಳ ಬಗ್ಗೆ ಒತ್ತು ಕೊಡಿ
- ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು , ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತ ಪಡಿಸಿಕೊಳ್ಳುವುದು.
- ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
- ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ
- ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
- ಚಿನ್ನದ ಒಡವೆಗಳನ್ನು ಪಾಲೀಸ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ
- ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.
- ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.
- ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ಗಳ ಬಳಿ ಅಪರಿಚಿತರು ನಿಮ್ಮ ಹಣ ಕೆಲಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಬದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.
- ಜನನಿಬಿಡ ಪ್ರದೇಶದಲ್ಲಿ ಪಾರ್ಕ್ , ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ
- ಅಪರಿಚಿತರು ನಂಬಿಸುವ ಅತೀಂದ್ರ ಶಕ್ತಿಗಳು , ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.
- ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.
- ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
- ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು ಆಕರ್ಶಿಸಬೇಡಿ
- ಆನ್ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
- ಅಗತ್ಯ ಸಮಯದಲ್ಲಿ 112 ಗೆ ಕರೆ ಮಾಡಿ ನಿಮ್ಮ ವಿಳಾಸ ,ಲ್ಯಾಂಡ್ ಮಾರ್ಕ್ ,ಪೊಲೀಸ್ ಠಾಣಾ ವ್ಯಾಪ್ತಿಯನ್ನುಹೇಳಿ ಸಮಸ್ಯೆ ಯನ್ನು ತಿಳಿಸಿ
- Advertisement -