Saturday, June 28, 2025
spot_imgspot_img
spot_imgspot_img

ಉಡುಪಿ: 2 ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ; ಪ್ರಕರಣ ದಾಖಲು..!

- Advertisement -
- Advertisement -

ಉಡುಪಿ: 2 ವರ್ಷದ ಮಗಳೊಂದಿಗೆ ತಾಯಿ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

ಎರಡು ವರ್ಷ ಪ್ರಾಯದ ಮಗಳೊಂದಿಗೆ ನಾಪತ್ತೆ ತಾಯಿಯನ್ನು ಕಾಪುವಿನ ಮಲ್ಲಾರು ಪಕೀರಣಕಟ್ಟೆಯಲ್ಲಿ ವಾಸವಾಗಿದ್ದ ನಸೀದಾ (27) ಎಂದು ಗುರುತಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಸೀದಾ ಅವರಿಗೆ ವಿಚ್ಛೇದನವಾಗಿದ್ದು,ಕಳೆದ ಒಂದು ವರ್ಷದಿಂದ ಮಗಳೊಂದಿಗೆ ವಾಸವಿದ್ದರು. ಇಪ್ಪತ್ತು ದಿನಗಳಿಂದ ತನ್ನ ಕುಟುಂಬದೊಂದಿಗೆ ಪಕೀರಣಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಆಗಸ್ಟ್ 4 ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯಲ್ಲಿದ್ದ ಚಿನ್ನ, ಹಣ ಮತ್ತು ಮೊಬೈಲ್‌ ಅನ್ನು ತೆಗೆದುಕೊಂಡು ತನ್ನ ಮಗಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾರೆ. ಮಹಿಳೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಆಕೆಯ ತಾಯಿ ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!