- Advertisement -
- Advertisement -


ಕಾರ್ಕಳ: ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಆನ್‌ಲೈನ್ ಮೂಲಕ ಕಡಿತವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾದಿರಾಜ (57) ಎಂಬವರ ಖಾತೆಗೆ ವಿಮಾ ಕಂಪೆನಿಯಿಂದ 3,67,269 ರೂ. ಹಣ ಬಂದಿದ್ದು, ಆ.9ರಂದು ಇವರ ಖಾತೆಯಿಂದ 3,55,199ರೂ. ಹಾಗೂ ಜಂಟಿ ಖಾತೆಯಿಂದ 299ರೂ. ಆನ್‌ಲೈನ್ ಮೂಲಕ ಕಡಿತವಾಗಿ ರುವುದಾಗಿ ದೂರಲಾಗಿದೆ.
- Advertisement -








