- Advertisement -
- Advertisement -



ಧರ್ಮನಗರ: 53 ನೇ ವರ್ಷದ ಗಣೇಶೋತ್ಸವ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಗೆ ಇಡ್ಕಿದ್ದು,ಕುಳ, ವಿಟ್ಲ ಮುಡ್ನೂರು ಈ ಮೂರು ಗ್ರಾಮದ ಬೈಲುವಾರು ಮನೆಗಳಿಗೆ ಆಮಂತ್ರಣ ಪತ್ರಿಕೆಯನ್ನು ಇಂದು ಒಂದೇ ದಿನ ಕಾರ್ಯಕರ್ತರು ವಿತರಿಸಿದರು.
ಕಳೆದ 52 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯೊಂದಿಗೆ ಇಲ್ಲಿನ ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಇಲ್ಲಿನ ಗಣೇಶೋತ್ಸವ ವಿಟ್ಲದ ಆಸು- ಪಾಸಿನಲ್ಲಿ ಹೆಸರುವಾಸಿಯಾಗಿದೆ. ಇಲ್ಲಿನ 25ನೇ ವರ್ಷದ ಗಣೇಶೋತ್ಸವವು ಬಹಳ ಅದ್ದೂರಿಯಾಗಿ ನಡೆದಿತ್ತು, 50ನೇ ವರ್ಷದ ಗಣೇಶೋತ್ಸವ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ ಕೊರೊನಾ ಸಮಯದಲ್ಲಿ ಬಂದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇಲ್ಲಿನ ಸುಮಾರು 200 ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಮೂರು ದಿನಗಳ ಕಾರ್ಯಕ್ರಮದಲ್ಲಿ ಒಗ್ಗಾಟ್ಟಾಗಿ ದುಡಿದು ಗಣೇಶನ ಕೃಪೆಗೆ ಪಾತ್ರರಾಗಿರುತ್ತಾರೆ.

- Advertisement -