Thursday, May 2, 2024
spot_imgspot_img
spot_imgspot_img

ಹಿಂದೂ ಸಂಘಟನೆ ಕಾರ್ಯಕರ್ತರ ಗೋ ಕಳ್ಳತನಕ್ಕೆ ಯತ್ನ ಪ್ರಕರಣ – ಸ್ಪಷ್ಟನೆ ನೀಡಿದ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ

- Advertisement -G L Acharya panikkar
- Advertisement -

ವಿಟ್ಲ(ಅ.29): ಮೇಯಲು ಕಟ್ಟಿ ಹಾಕಿದ್ದ ಗೋವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದರು ಎಂದು ಆರೋಪಿಸಿ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿತ್ತು.ನವೀನ ಕುದ್ರೆಬೆಟ್ಟು ಮತ್ತು ಮಾದವ ಸುದೇಕಾರ್ ಗೋವು ಕಳ್ಳತನ ಮಾಡಲು ಯತ್ನಿಸಿದರು ಎಂದು ಆರೋಪಿಸಲಾಗಿತ್ತು.ಈ ಇಬ್ಬರು ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿತ್ತು.

ಕಲ್ಲಡ್ಕ ವಿಟ್ಲ ರಸ್ತೆಯ ಬದಿಯಲ್ಲಿ ಕಟ್ಟಿ ಹಾಕಿದ್ದ ಮುಹಮ್ಮದ್ ಇಮ್ರಾನ್ ಎಂಬವರಿಗೆ ಸೇರಿದ ಒಂದು ವರ್ಷ ಪ್ರಾಯದ ಗಂಡು ಕರುವನ್ನು ಕಳ್ಳತನ ಮಾಡಿ ಇಬ್ಬರು ಪಿಕ್ ಅಪ್ ನಲ್ಲಿ ಸಾಗಿಸುತ್ತಿದ್ದರು. ಪಿಕ್ ಅಪ್ ಅನ್ನು ತಡೆದ ಸ್ಥಳೀಯರು ಇಬ್ಬರನ್ನೂ ಹಿಡಿದು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡಇದೊಂದು ಸುಳ್ಳು ವದಿಂತಿಯಾಗಿರುತ್ತದೆ. ಸತ್ಯ ಸಂಗತಿಯೇನೆಂದರೆ ಈ ಕರು ಸುಮಾರು ಮೂರು ದಿನಗಳಿಂದ ರಸ್ತೆಬದಿಯಲ್ಲಿ ತಿರುಗಾಡುತ್ತಿದ್ದು ನಮ್ಮ ಸಂಘಟನೆಯ ಕಾರ್ಯಕರ್ತರಾದ ಇವರುಗಳು ಈ ಕರುವನ್ನು ರಕ್ಷಿಸಿ ಗೋಶಾಲೆಗೆ ಸೇರಿಸುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿನ ಮುಸ್ಲಿಂ ಸಮುದಾಯದ ಕೆಲ ವ್ಯಕ್ತಿಗಳು ಅಡ್ಡಗಟ್ಟಿ ವಿನಾಕಾರಣ ಅಪಪ್ರಚಾರದ ಸುದ್ದಿಯನ್ನು ಮಾಡುತ್ತಿದ್ದಾರೆ ಇವರು ನೀಡಿರುವ ದೂರು ಸಂಪೂರ್ಣವಾಗಿ ಸುಳ್ಳಾಗಿಸುತ್ತದೆ ಸಂಘಟನೆಯ ಕಾರ್ಯಕರ್ತರಾದ ಇವರುಗಳು ಮತಾಂಧರು ನೀಡಿದ ದೂರಿನಂತೆ ಕೆಟ್ಟ ಕೆಲಸ ಮಾಡುವಂತಹ ಯುವಕರ ಆಗಿರುವುದಿಲ್ಲ ಇದೊಂದು ಸಂಘಟನೆಯ ಕಾರ್ಯಕರ್ತರ ಬಲವನ್ನು ಕುಗ್ಗಿಸುವ ಒಂದು ಷಡ್ಯಂತ್ರವಾಗಿರುತ್ತದೆ.ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!