Sunday, June 29, 2025
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಬಾವಿಯಲ್ಲಿ ಪತ್ತೆ

- Advertisement -
- Advertisement -

ಕಾಸರಗೋಡು : ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯ ಘಟನೆ ನಗರ ಹೊರವಲಯದ ಬಟ್ಟಂಪಾರೆಯಲ್ಲಿ ನಡೆದಿದೆ.

ಬಟ್ಟಂಪಾರೆಯ ಎಸ್ . ಶಿವ ರವರ ಪತ್ನಿ ಶರ್ಮಿಳಾ ( 44) ಮೃತ ಮಹಿಳೆ.

ಸೋಮವಾರ ರಾತ್ರಿ ಸುಮಾರು11.30 ಗಂಟೆಯ ಬಳಿಕ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಡಿದಾಗ ತಡರಾತ್ರಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತ ದೇಹವನ್ನು ಮೇಲಕ್ಕೆತ್ತಿದರು .

ಶರ್ಮಿಳಾರ ಪತಿ ಶಿವ ಅಮೈ ರಸ್ತೆ ಬಳಿಯ ಅಕೌಂಟೆಂಟ್ ಕಚೇರಿ ನಡೆಸುತ್ತಿದ್ದು ಇದೇ ಕಚೇರಿಯಲ್ಲಿ ಶರ್ಮಿಳಾ ಕೂಡಾ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!