Thursday, August 13, 2026
spot_imgspot_img
spot_imgspot_img

ಕೈಕಾರ: ( ಸೆ. 4) ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟ

- Advertisement -
- Advertisement -

ಕೈಕಾರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕೈಕಾರ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟ ಸೆ. 4 ನೇ ಬುಧವಾರ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ಕೈಕಾರದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 9 ಗಂಟೆಗೆ ಶ್ರೀಮತಿ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷರು, ಗ್ರಾಮ ಪಂಚಾಯತ್ ಒಳಮೊಗ್ರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಒಳಮೊಗ್ರು ಗ್ರಾ. ಪಂ ನ ಉಪಾಧ್ಯಕ್ಷರು, ಅಶ್ರಫ್ ಉಜಿರೋಡಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ ರೈ ಕೇರಿ, ಸದಸ್ಯರು, ಗ್ರಾ. ಪಂ., ಒಳಮೊಗ್ರು, ಪ್ರದೀಪ್ ಎಸ್., ಸದಸ್ಯರು, ಗ್ರಾ. ಪಂ., ಒಳಮೊಗ್ರು, ಶ್ರೀಮತಿ ನಿಮಿತ ನವೀನ್ ರೈ, ಸದಸ್ಯರು, ಗ್ರಾ. ಪಂ., ಒಳಮೊಗ್ರು, ಶ್ರೀಮತಿ ನಳಿನಾಕ್ಷಿ, ಸದಸ್ಯರು, ಗ್ರಾ. ಪಂ., ಒಳಮೊಗ್ರು, ಶ್ರೀಮತಿ ವನಿತಾ, ಸದಸ್ಯರು, ಗ್ರಾ. ಪಂ., ಒಳಮೊಗ್ರು, ಮನಮೋಹನ ರೈ, ಚೆಲ್ಯಡ್ಕ ಬ್ರೈಟ್ ವೇ ಕನ್ಸ್‌ಲ್‌ಟೆನ್ಸಿ & ಎಲೈಟ್ಸ್ ಸರ್ವೀಸಸ್ , ಶಶಿಕಿರಣ್ ರೈ ಮೊಡಪ್ಪಾಡಿ ಮಾಜಿ ಸದಸ್ಯರು, ಗ್ರಾ. ಪಂ., ಒಳಮೊಗ್ರು, ದಿನೇಶ್ ರೈ ಮೊಡಪ್ಪಾಡಿಮೂಲೆ ಉದ್ಯಮಿಗಳು, ಶ್ರೀಮತಿ ಸುಮತಿ ಶ್ರೀಧರ ಪಿ. ರೈ ಬಾನಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವರಾಮ ಶೆಟ್ಟಿ, ಶಿವಸದನ ಬಿಲ್ಲಾಜೆ, ಶ್ರೀಧರ ರೈಹೊಸಮನೆ ನಿವೃತ್ತ ಮುಖ್ಯಗುರುಗಳು, ಮುರಳೀಧರ ಕಲ್ಲೂರಾಯ, ಛಾಯ ಕುಟೀರ ಜಯರಾಮ ರೈ ಬನ್ನೂರು, ನಿವೃತ್ತ ಉಪನ್ಯಾಸಕರು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಶಾಸಕರು, ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ, ಮಾಜಿ ಶಾಸಕರು, ನವೀನ್ ಭಂಡಾರಿ ಕಾರ್ಯನಿರ್ವಾಹಣಾಧಿಕಾರಿ, ತಾ. ಪಂ. ಪುತ್ತೂರು, ಲೋಕೇಶ್ ಎಸ್. ಆರ್. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು, ಚಕ್ರಪಾಣಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪುತ್ತೂರು, ಹೇಮನಾಥ್ ಶೆಟ್ಟಿ ಕಾವು ಸಂಚಾಲಕರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಶಶಿಕುಮಾ‌ರ್ ರೈ ಬಾಲ್ಯೊಟ್ಟು ನಿರ್ದೇಶಕರು, ದ.ಕ.ಜಿ.ಕೇ.ಸ. ಬ್ಯಾಂಕ್ ಮಂಗಳೂರು,ರೋ| ಸುರೇಶ್‌ , ಅಧ್ಯಕ್ಷರು, ರೋಟರಿ ಕ್ಲಬ್‌ ಸ್ವರ್ಣ ಪುತ್ತೂರು, ನವೀನ್ ವೇಗಸ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪುತ್ತೂರು, ವಿಷ್ಣುಪ್ರಸಾದ್ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಪುತ್ತೂರು, ಸುರೇಂದ್ರ ರೈ ಬಳ್ಳಮಜಲು, ಅಧ್ಯಕ್ಷರು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪುತ್ತೂರು ತಾಲೂಕು , ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕುಂಬ್ರ, ಪ್ರಶಾಂತ್ ರೈ ಕೈಕಾರ, ಪ್ರೊ ಕಬಡ್ಡಿ ಆಟಗಾರ, ಡಾ. ಹರ್ಷ ಕುಮಾ‌ರ್ ರೈ ಮಾಡಾವು ಉದ್ಯಮಿಗಳು , ಜಯಪ್ರಾಕಾಶ್ ರೈ ಚೆಲ್ಯಡ್ಕ ಕಾರ್ಯನಿರ್ವಹಣಾಧಿಕಾರಿ, ಪ್ರಾ, ಕೃ. ಪ. ಸ. ಸಂಘ ನಿ. ಮುಂಡೂರು, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚಂದ್ರಹಾಸ ರೈ ಪನಡ್ಕ, ಪ್ರಗತಿಪರ ಕೃಷಿಕರು, ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ, ನಿವೃತ್ತ ಅಧಿಕಾರಿ ವಿಜಯ ಬ್ಯಾಂಕ್ಮ ಶ್ರೀಮತಿ ಗೀತಾ ಡಿ. ರೈ, ಪಿಂಗಾರ ಕೈಕಾರ, ಹರೀಶ ಬಿಜತ್ರೆ, ಮಾಜಿ ಸದಸ್ಯರು, ತಾ. ಪಂ.ಪುತ್ತೂರು, ಕೀರ್ತನ್ ರೈ ತೊಟ್ಲ, ಉದ್ಯಮಿಗಳು, ಶ್ರೀಮತಿ ವಿದ್ಯಾಶ್ರೀ, ಆರೋಗ್ಯ ಅಧಿಕಾರಿ, PHO ಕೈಕಾರ, ಶ್ರೀ ಪ್ರಜ್ವಲ್ ರೈ ತೊಟ್ಲ, ಚಿಪ್ಪಾರುಗುತ್ತು ಗೌರವಾಧ್ಯಕ್ಷರು, ಸಹ್ಯಾದ್ರಿ ಫ್ರೆಂಡ್ಸ್ (ರಿ.) ಕೈಕಾರ ಇವರು ಗೌರವ ಉಪಸ್ಥಿತಿಯಲ್ಲಿರುವರು.

ಸಂಜೆ ಎನ್. ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ (ರಿ.) ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು, ಹರಿಪ್ರಸಾದ್, ಶಿಕ್ಷಣ ಸಂಯೋಜಕರು ಪುತ್ತೂರು, ಶಶಿಕಲಾ ಸಿ.ಆರ್.ಪಿ. ಕುಂಬ್ರ ಕ್ಲಸ್ಟರ್, ರಾಧಾಕೃಷ್ಣ ರೈ ಬೂಡಿಯಾರು, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಪಾಡಿ, ಉದಯ ಪೂಜಾರಿ, ಸ್ಥಾಪಕಾಧ್ಯಕ್ಷರು ಬಿರ್ವೆರ್ ಕುಡ್ಲ, ದಯಾನಂದ ರೈ ಕೋರ್ಮಂಡ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಸೀತಾರಾಮ ರೈ ಚೆಲ್ಯಡ್ಕ, MRPL ಮಂಗಳೂರು, ಮೋಹನ್‌ದಾಸ್ ರೈ ಕುಂಬ್ರ, ಉದ್ಯಮಿಗಳು, ಸೀತಾರಾಮ ರೈ ಕೆದಂಬಾಡಿಗುತ್ತು ಪದ್ಮಶ್ರೀ ಸೋಲಾರ್ ಪುತ್ತೂರು, ಹರೀಶ್ ವಾಗ್ಗೆ, ಸದಸ್ಯರು, ಗ್ರಾ. ಪಂ. ಆರ್ಯಾಪು, ಯತೀಶ್ ದೇವ, ಸದಸ್ಯರು, ಗ್ರಾ. ಪಂ ಆರ್ಯಾಪು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಗನ್ನಾಥ ರೈ ಕೊಮ್ಮಂಡ , ರಘುರಾಮ ರೈ ಎರ್ಮೆಟ್ಟಿ, ಪ್ರಗತಿಪರ ಕೃಷಿಕರು, ಗಂಗಾಧರ ಶೆಟ್ಟಿ ಪನಡ್ಕ ಉದ್ಯಮಿಗಳು ,ಸಂತೋಷ್ ಕುಮಾರ್ ರೈ ಕೈಕಾರ ಉದ್ಯಮಿಗಳು, ಭಗವಾನ್‌ದಾಸ್‌ ರೈ ಚಿಲ್ಮೆತ್ತಾರು ಉದ್ಯಮಿಗಳು , ಪ್ರಜನ್ ರೈ ತೊಟ್ಲ ಅಧ್ಯಕ್ಷರು, ಸರ್ವಶಕ್ತಿ ಯುವಕ ಮಂಡಲ (ರಿ.) ಕೈಕಾರ, ಶ್ರೀಮತಿ ಪೂರ್ಣಿಮ ಕರುಣಾಕರ್, ಅಧ್ಯಾಪಕರು ಇರ್ದೆ ಉಪ್ಪಳಿಗೆ, ಶ್ರೀಮತಿ ಜಯಂತಿ, ಕಾರ್ಯದರ್ಶಿ, ಕೈಕಾರ ಹಾ.ಉ.ಸ.ಸಂಘ ಇವರು ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!