







ಜೆಸಿಐ ವಿಟ್ಲ ಇದರ 2024ರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ದೈಗೋಳಿ ಸಾಯಿ ನಿಕೇತನ ಆಶ್ರಮದಲ್ಲಿ ನಡೆಯಿತು.
ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಜೆಸಿ ಶ್ರೀಧರ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಜೆಸಿ. ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷ, ರಾಷ್ಟ್ರೀಯ ತರಬೇತುದಾರ ಹಸನ್ ವಿಟ್ಲ, ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷ, ರೋಟರಿ ಕ್ಲಬ್ ವಿಟ್ಲದ ಸ್ಥಾಪಕ ಅಧ್ಯಕ್ಷ ಜೆಸಿ. ಭಾಸ್ಕರ್ ಶೆಟ್ಟಿ, ಆಶ್ರಮದ ಫೌಂಡರ್ ಹಾಗೂ ಟ್ರಸ್ಟಿ ಉದಯಕುಮಾರ್ ನೂಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಿಲಾಯಿತು. ದಾನ್ ಕಾರ್ಯಕ್ರಮ ಅಡಿಯಲ್ಲಿ ಜೆಸಿಐ ವಿಟ್ಲ ವತಿಯಿಂದ ವೀಲ್ ಚೇರ್, ವಾಕರ್ ಹಾಗೂ 150ಕೆಜಿ ಅಕ್ಕಿಯನ್ನು ಆಶ್ರಮ ನಿವಾಸಿಗಳಿಗೆ ಹಸ್ತಾಂತರಿಸಲಾಯಿತು. ಆಶ್ರಮ ವಾಸಿಗಳಿಗೆ ಯೋಗ ಪಟು ಸಂಜೀವ ಪೂಜಾರಿ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಅತಿಥಿಗಳನ್ನು ಕೋಶಾಧಿಕಾರಿ ಜೆಸಿ. ಲುವಿಸ್ ಮಸ್ಕರೇನಸ್ ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಜೆಸಿ. ಆರ್ಥಿಕ್ ವಂದಿಸಿದರು. ಜೆಸಿ. ಮುರಳಿಪ್ರಸಾದ್, ಜೆಸಿ. ರಿತೇಶ್ ಶೆಟ್ಟಿ, ಜೆಸಿ ಹರ್ಷಿತ್, ಜೆಸಿ ರಜತ್ ಆಳ್ವ ಹಾಗೂ ಜೆಸಿ. ಶಿವಾನಿ ಶೆಟ್ಟಿ ಸಹಕರಿಸದರು.