Monday, July 27, 2026
spot_imgspot_img
spot_imgspot_img

ವಿಟ್ಲ: ಬಿಜೆಪಿ ಒಂದನೇ ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

- Advertisement -
- Advertisement -

ವಿಟ್ಲ ಬಿಜೆಪಿ ಒಂದನೇ ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನವನ್ನು ಶಕ್ತಿ ಕೇಂದ್ರ ಪ್ರಮುಖ್ ಲಕ್ಷ್ಮಣ್ ವಿ ಮಾಡ ಇವರ ನೇತೃತ್ವದಲ್ಲಿ 2ನೇ ಬೂತ್‌ನ ಹಿರಿಯ ಕಾರ್ಯಕರ್ತ ಚಂದಪ್ಪ ಗೌಡ ನೆಕ್ಕಿಲಾರ್ ಇವರ ಮನೆಯಲ್ಲಿ ಆರಂಭಿಸಲಾಯಿತು.

ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ಸದಸ್ಯತ್ವ ಅಭಿಯಾನದ ಬಗ್ಗೆ ವಿವರಿಸಿದರು. ವಿಟ್ಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ವಿಟ್ಲ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹರೀಶ್ ಮಾಡ, ರವಿ ಅಂಚನ್, ವಿಶ್ವನಾಥ್ ನಾಯ್ತೋಟ್ಟು, ಉದಯ್ ಕುಮಾರ್ ನಾಯ್ತೋಟ್ಟು, ನಿತಿನ್ ಬೊಡ್ಡೋಣಿ, ಪ್ರಶಾಂತ್ ಕಟ್ಟೆ, ಜಯರಾಮ ಅಡ್ಡಾಲಿ, ನವೀನ್ ಚಂದ್ರ, ಶಶಿಧರ ಕೈಂತಿಲ, ಉಮೇಶ್ ಇಂದ್ರಪಡ್ಪು, ನಿತಿನ್ ನೆಕ್ಕಿಲಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೀರಪ್ಪ ಗೌಡ ರಾಯರಬೆಟ್ಟು ಸ್ವಾಗತಿಸಿದರು, ಪದ್ಮನಾಭ ವಂದಿಸಿದರು.

- Advertisement -

Related news

error: Content is protected !!