- Advertisement -
- Advertisement -






“ಕಾಪಿಕಾಡ್ ಶೋ” ಪ್ರದರ್ಶಿಸಲು ಸೌದಿ ಅರೇಬಿಯಾಕ್ಕೆ ತೆರಳಿರುವ ಖ್ಯಾತ ತುಳು ಕಲಾವಿದ, ನಟ, ನಿರ್ದೇಶಕ “ತೆಲಿಕೆದ ಬೊಳ್ಳಿ” ಡಾ. ದೇವದಾಸ್ ಕಾಪಿಕಾಡ್ ಅವರನ್ನು ಜುಬೈಲ್ ಅಲ್ ಮುಝೈನ್ ಸಂಸ್ಥೆಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಅಲ್ ಮುಝೈನ್ ಸಂಸ್ಥೆಯ ಮುಖ್ಯಸ್ಥರಾದ ಝಕರಿಯಾ ಬಜ್ಪೆ, ಸಿಇಒ ಶರೀಫ್ ಬೋಳಾರ್ ಕಾಪಿಕಾಡ್ ದಂಪತಿಯನ್ನು ಸ್ಮರಣಿಕೆ ನೀಡಿ ಗೌರವಿಸಿದರು. ದೇವದಾಸ್ ಕಾಪಿಕಾಡ್ ಪತ್ನಿ ಶರ್ಮಿಳಾ ಕಾಪಿಕಾಡ್ ಉಪಸ್ಥಿತರಿದ್ದರು. ಸೆಪ್ಟಂಬರ್ 14 ರವರೆಗೆ “ದಿ ಕಾಪಿಕಾಡ್ ಶೋ” ಐದು ಪ್ರದರ್ಶನಗಳು ಸೌದಿ ಅರೇಬಿಯಾದ ಜುಬೈಲ್ ಪುಲಿ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಲಿದ್ದು, ಬಹುತೇಕ ಟಿಕೆಟ್ ಗಳು ಖಾಲಿಯಾಗಿವೆ.
- Advertisement -