Monday, July 7, 2025
spot_imgspot_img
spot_imgspot_img

ಪಾಣೆಮಂಗಳೂರು: (ಅ. 3- 13) ಶ್ರೀ ವಿಠ್ಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಸಂಭ್ರಮದ ಶ್ರೀ ಶಾರದಾ ಪೂಜಾ ಮಹೋತ್ಸವ- ಪಾಣೆಮಂಗಳೂರು ದಸರಾ

- Advertisement -
- Advertisement -

ಪಾಣೆಮಂಗಳೂರು: ಶ್ರೀ ವಿಠ್ಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಸಂಭ್ರಮದ ಶ್ರೀ ಶಾರದಾ ಪೂಜಾ ಮಹೋತ್ಸವವು ಅ. 3ನೇ ಗುರುವಾರದಿಂದ ಅ. 13ನೇ ಆದಿತ್ಯವಾರ ವರೆಗೆ ಶ್ರೀ ವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರಿನಲ್ಲಿ ನಡೆಯಲಿದೆ.

ದಿನಾಂಕ 03-10-2024ನೇ ಗುರುವಾರ ಪ್ರಾತಃಕಾಲ ಶ್ರೀ ದೇವತಾ ಪ್ರಾರ್ಥನೆ, ಗಣಹೋಮ ನಡೆದು, ಪೂರ್ವಾಹ್ನ ಗಂಟೆ 9.00ಕ್ಕೆ ಶ್ರೀವೀರವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಶ್ರೀ ದೇವಿಯ ಮೆರವಣಿಗೆ ನಡೆಯಲಿದೆ. ಬಳಿಕ 11.30ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆದು, ಭಜನೆ, ಪ್ರಸನ್ನ ಪೂಜೆ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ಭಜನಾ ಕಾರ್ಯಕ್ರಮ ನಡೆದು ಬಳಿಕ ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ 8:30ರಿಂದ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 04-10-2024ನೇ ಶುಕ್ರವಾರ ಪ್ರಾತಃಕಾಲ ಪ್ರಾರ್ಥನೆ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ ಪ್ರಾರಂಭ, ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು, 12.30ಕ್ಕೆ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ಭಜನೆ, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ ಗಂಟೆ 8.30ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ವಿನೂತನ ಶೈಲಿಯ ಕಾರ್ಯಕ್ರಮ “ಗೀತಾ ಸಾಹಿತ್ಯ ಸಂಭ್ರಮ” ನಿತ್ಯನೂತನ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 05-10-2024ನೇ ಶನಿವಾರ ಪ್ರಾತಃಕಾಲ ಪ್ರಾರ್ಥನೆ, ಶ್ರೀ ಪಂಚದುರ್ಗಾ ಹವನ ಪ್ರಾರಂಭ, ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ 12.30ಕ್ಕೆ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಬಳಿಕ 8.30ರಿಂದ ಕಾಪಿಕಾಡ್, ಸಾಯಿ, ವಾಮಂಜೂರು ಅಭಿನಯದಲ್ಲಿ ಚಾಪರ್‍ಕ ಕಲಾವಿದರಿಂದ “ನಮಸ್ಕಾರ ಮಾಸ್ಟ್ರೇ” ಎಂಬ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ದಿನಾಂಕ 06-10-2024ನೇ ಆದಿತ್ಯವಾರ ಪ್ರಾತಃಕಾಲ ಪ್ರಾರ್ಥನೆ, ಶ್ರೀ ಸರಸ್ವತಿ ಹವನ ಪ್ರಾರಂಭ, ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ 12:30ಕ್ಕೆ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ನಡೆದ ನಂತರ ರಾತ್ರಿ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ ಗಂಟೆ 8:30ರಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ರವೀಂದ್ರ ಪ್ರಭು ಮತ್ತು ಬಳಗದವರಿಂದ ಕರ್ನಾಟಕ ಹಾಗೂ ಕೇರಳದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 07-10-2024ನೇ ಸೋಮವಾರದಂದು ಪ್ರಾತಃಕಾಲ ಪ್ರಾರ್ಥನೆ, ಸಪ್ತಶತಿ ಪಾರಾಯಣ, ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ಭಜನಾ ಕಾರ್ಯಕ್ರಮ ನಡೆದು, ರಾತ್ರಿ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ, ನಂತರ 8:30ರಿಂದ ಶ್ರೀ ಬಪ್ಪನಾಡು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಸರ್ವಮಂಗಳ ಮಾಂಗಲ್ಯೇ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ದಿನಾಂಕ 08-10-2024ನೇ ಮಂಗಳವಾರದಂದು ಪ್ರಾತಃಕಾಲ ಪ್ರಾರ್ಥನೆ, ಸಪ್ತಶತಿ ಪಾರಾಯಣ, ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ನಡೆದು ಬಳಿಕ ರಾತ್ರಿ ಗಂಟೆ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಅದಾದ ಬಳಿಕ 8:30ರಿಂದ ಸಂಗಮ ಕಲಾವಿದರು ಉಜಿರೆ ಇವರಿಂದ ಈ ವರ್ಷದ ಕಲಾ ಕಾಣಿಕೆ ಸುಬ್ಬು ಸಂಟ್ಯಾರ್‍ ವಿರಚಿತ ತುಳು ಹಾಸ್ಯಮಯ ಸಾಂಸಾರಿಕ ನಾಟಕ “ಪಚ್ಚು ಪಾತೆರೊಡು” ಜರುಗಲಿದೆ.

ದಿನಾಂಕ 09-10-2024ನೇ ಬುಧವಾರದಂದು ಪ್ರಾತಃಕಾಲ ಪ್ರಾರ್ಥನೆ, ಸಪ್ತಶತಿ ಪಾರಾಯಣ, ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಮೂಲ ನಕ್ಷತ್ರದಲ್ಲಿ ಶ್ರೀ ಶಾರದಾ ದೇವಿಗೆ ವಿಶೇಷ ಪೂಜೆ ನಡೆದು, ಮಧ್ಯಾಹ್ನ ಗಂಟೆ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಂಜೆ 4:00ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆದ ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆದು, 8:30ರಿಂದ ’ರಾಷ್ಟ್ರ ದೇವೋಭವ’ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕದ ಕಲಾಶ್ರಿ ವಿದುಷಿ ಶಾರದಾ ಮಣಿಶೇಖರ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದ ಪ್ರಸ್ತುತ ಪಡಿಸುವ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ನೃತ್ಯ ವೈವಿಧ್ಯ “ಸನಾತನ ರಾಷ್ಟ್ರಾಂಜಲಿ” ಕಾರ್ಯಕ್ರಮ ನಡೆಯಲಿದೆ.

ದಿನಾಂಕ 10-10-2024ನೇ ಗುರುವಾರದಂದು ಪ್ರಾತಃಕಾಲ ಪ್ರಾರ್ಥನೆ, ಸಪ್ತಶತಿ ಪಾರಾಯಣ, ಭಜನಾ ನಡೆದ ಬಳಿಕ ಮಧ್ಯಾಹ್ನ ಗಂಟೆ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ಮರುದಿನ ನಡೆಯುವ ಶ್ರೀ ಚಂಡಿಕಾ ಹವನದ ಬಗ್ಗೆ ವಿಶೇಷ ಪ್ರಾರ್ಥನೆ ಕಲಶ ಪ್ರತಿಷ್ಠಾಪನೆ ನಡೆದು, ಬಳಿಕ 6:30ಕ್ಕೆ ಶ್ರೀ ದೇವಿಗೆ ವಿಶೇಷ ದೀಪಾಲಂಕಾರ ಪೂಜೆ ನಡೆಯಲಿದೆ. ಸಾಯಂಕಾಲ ಭಜನಾ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ 8:30ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕ್ರತ ’ಕಲಾ ಸಾರಥಿ’ ತೋನ್ಸೆ ಪುಷ್ಪಕ್ ಕುಮಾರ್‍ ಇವರಿಂದ “ಶ್ರಿ ಕೃಷ್ಣ ತುಲಾಭಾರ” ಎಂಬ ಹರಿಕಥಾ ಕಾಲಕ್ಷೇಪ ನಡೆಯಲಿದೆ.

ದಿನಾಂಕ 11-10-2024ನೇ ಶುಕ್ರವಾರದಂದು ಪ್ರಾತಃಕಾಲ ಪ್ರಾರ್ಥನೆ, ಶ್ರೀ ಚಂಡಿಕಾ ಹವನ ಪ್ರಾರಂಭ, ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ 12:30ಕ್ಕೆ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಂಜೆ ಭಜನೆ ಮುಗಿದ ಬಳಿಕ, ರಾತ್ರಿ ಗಂಟೆ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ 8:30ರಿಂದ ತಾಂಬೂಲ ಕಲಾವಿದೆರ್‍ ಪುಂಜಾಲಕಟ್ಟೆ-ಕುಡ್ಲ ಅಭಿನಯದ “ಎಲ್ಲೆ ದಾದ ಏರೆಗ್ ಗೊತ್ತು” ನಾಟಕ ಜರುಗಲಿದೆ.

ದಿನಾಂಕ 12-10-2024ನೇ ಶನಿವಾರದಂದು ಪ್ರಾತಃಕಾಲ ಪ್ರಾರ್ಥನೆ, ಶತಮಾನೋತ್ಸವದ ಬಗ್ಗೆ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ಶ್ರೀ ಶಾರದಾ ದೇವಿಗೆ 108 ನಮಸ್ಕಾರ ಸೇವೆ ನಡೆದು, ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆದ ನಂತರ, 8:30ಕ್ಕೆ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ( ರಿ. ) ಇದರ ನೃತ್ಯಗುರು ವಿದುಷಿ ರೋಹಿಣಿ ಉದಯ್ ಹಾಗೂ ಶಿಷ್ಯೆಯರಿಂದ “ನೃತ್ಯರಂಜಿನಿ ಕಾರ್ಯಕ್ರಮ” ಮತ್ತು ಶಾಲಾ ಹಿರಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 13-10-2024ನೇ ಆದಿತ್ಯವಾರದಂದು ಪೂರ್ವಾಹ್ನ ಭಜನಾ ಕಾರ್ಯಕ್ರಮ ನಡೆದ ಬಳಿಕ ಮಧ್ಯಾಹ್ನ 12:00ಕ್ಕೆ ಶ್ರೀ ಶಾರದಾ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ಬಳಿಕ 2:30ಕ್ಕೆ ಶ್ರೀ ನಾರಿಕುಂಭೇಶ್ವರ ಯಕ್ಷಗಾನ ಸಂಘ, ನರಿಕೊಂಬು ಇವರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ 6:30ರಿಂದ ನಾಡಿನ ಖ್ಯಾತ ತಂಡ “ಸುರಭಿ ಆರ್ಕೆಸ್ಟ್ರಾ” ಇವರಿಂದ ಚಲನಚಿತ್ರ ರಂಗದ ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್‍ ಬೆಂಗಳೂರು ಇವರ ನಿರ್ದೇಶನದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದರ ಸಮ್ಮಿಲನದೊಂದಿಗೆ “ಸಂಗೀತ ರಸಮಂಜರಿ” ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ. ನಂತರ ವಿಸರ್ಜನಾ ಪೂಜೆ, ಪ್ರಸಾದ ವಿತರಣೆ, ವೇಷಧಾರಿಗಳ ಪ್ರತಿಭಾ ಪ್ರದರ್ಶನದೊಂದಿಗೆ ಶ್ರೀ ದೇವಿಯ ಭವ್ಯ ಶೋಭಾಯಾತ್ರೆ ನಡೆದು, ಶ್ರೀ ದೇವಿಯ ಜಲಸ್ತಂಭನ ನಡೆಯಲಿದೆ.

- Advertisement -

Related news

error: Content is protected !!