


ಅಳಿಕೆ : ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ದಾರ ಸಂಬಂಧವಾಗಿ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ನಿರ್ಮಾಣದ ಶಿಲಾ ಮೆರವಣಿಗೆ ಕಾರ್ಯಕ್ರಮವು ದಿನಾಂಕ 06-10-2024ನೇ ಭಾನುವಾರದಂದು ನಡೆಯಿತು.

ವಿಟ್ಲಸೀಮೆಯ ದೇವರಾದ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪೂರ್ವಾಹ್ನ ಗಂಟೆ 7.45ಕ್ಕೆ ಮಹಾಮಂಗಳಾರತಿ ನೆರವೇರಿಸಿ ಶಿಲಾ ಸ್ವಾಗತದ ವಾಹನಜಾಥಾಕ್ಕೆ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಚಾಲನೆ ನೀಡಿದರು.


ಮುಖ್ಯ ಅತಿಥಿಗಳಾಗಿ ಜಗನ್ನಾಥ ಸಾಲಿಯಾನ್, ಸದಸ್ಯರು, ಆಡಳಿತ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ನಿತ್ಯಾನಂದ ನಾಯಕ್, ಸದಸ್ಯರು ವಿಠಲ ವಿದ್ಯಾವರ್ದಕ ಸಂಘ, ವಿಟ್ಲ, ಕರುಣಾಕರ ಗೌಡ ನಾಯ್ತೋಟ್, ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್, ರಾಧಾಕೃಷ್ಣ ನಾಯಕ್ ಸಮಾಜಸೇವಕರು ವಿಟ್ಲ, ಸತೀಶ್ ಆಳ್ವ ಇರಾಬಾರಿಕೆ ಉದ್ಯಮಿಗಳು ಹಾಗೂ ಆರ್ಥಿಕ ಸಮಿತಿಯ ಸಂಚಾಲಕರು, ಗೋಪಾಲಕೃಷ್ಣ ದೇವಸ್ಥಾನ, ಮಡಿಯಾಲ ಹಾಗೂ ಸಮಾಜದ ಇತರ ಗಣ್ಯರು ಉಪಸ್ಥಿತರಿದ್ದರು.
ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಭಟ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀರ್ಣೋದ್ದಾರ ಸಮಿತಿಯ ಸಂಚಾಲಕ ಶ್ರೀ ಕಾನ ಈಶ್ವರ ಭಟ್ ಸ್ವಾಗತಕೋರಿದರು. ಸಮಿತಿಯ ಕಾರ್ಯಧ್ಯಕ್ಷ ಗೋವಿಂದ ಪ್ರಕಾಶ ವದ್ವ ಧನ್ಯವಾದ ಸಮರ್ಪಿಸಿದರು. ಸಮಿತಿಯ ಸಹಕೋಶಾಧಿಕಾರಿ ಪ್ರವೀಣ ಪೂಜಾರಿ ಅಳಿಕೆ ನಿರ್ವಹಿಸಿದರು.
ವಿಟ್ಲದಿಂದ ಹೊರಟ ಬೃಹತ್ ಶಿಲಾವಾಹನ ಜಾಥಾವನ್ನು ಅಳಿಕೆ ಗ್ರಾಮದ ಪ್ರವೇಶದ್ವಾರ ಪಡಿಬಾಗಿಲಿನಲ್ಲಿ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಪಡಿಬಾಗಿಲಿನಿಂದ ಮಡಿಯಾಲ ದೇವಸ್ಥಾನದವರೆಗೆ ಸಾಂಸ್ಕೃತಿಕ ವೈವಿಧ್ಯಮಯ ಕಲಾತಂಡಗಳೊಂದಿಗೆ ಶಿಲಾಸ್ವಾಗತ ಕಾಲ್ನಡಿಗೆ ಮೆರಣಿಗೆಯ ಉದ್ಘಾಟನೆಯನ್ನು ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರುಬೀಡು, ಸದಸ್ಯರು ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯಸರಕಾರ ಹಾಗೂ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆಯನ್ನು ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್ಯಾಧ್ಯಕ್ಷರು ಅಭಿವೃದ್ಧಿ ಸಮಿತಿ, ಶಂಕರನಾರಾಯಣ ದೇವಸ್ಥಾನ ಎರುಂಬು ಇವರು ನೆರವೇರಿಸಿಕೊಟ್ಟರು.



ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮಹೇಶ ಮಡಿಯಾಲ ಇವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ರಾಘವ ಮಣಿಯಾಣಿ, ಅಧ್ಯಕ್ಷರು ಕೇಪು ಗ್ರಾಮ ಪಂಚಾಯತ್, ಸನತ್ ಕುಮಾರ್ ಜಿ. ಅಧ್ಯಕ್ಷರು ಸಂಗಮ ಯುಕವ ಮಂಡಲ, ಪಡಿಬಾಗಿಲು, ಗಿರೀಶ್ ಆಚಾರ್ಯ, ಅಧ್ಯಕ್ಷರು ವಿಶ್ವಬ್ರಾಹ್ಮಣ ಸಂಘ, ಪಡಿಬಾಗಿಲು ಇವರೆಲ್ಲರು ಉಪಸ್ಥಿತರಿದ್ದರು. ಮಲ್ಲಿಕಾ ಪ್ರಶಾಂತ ಪಕ್ಕಳ ಹಾಗೂ ಪ್ರಭಾಕರ ಶೆಟ್ಟಿ ದಂಬೆಕಾನ ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಿದರು. ರಾಜೇದ್ರ ರೈ, ದೈಹಿಕ ಶಿಕ್ಷಕರು ಪಡಿಬಾಗಿಲು ಸ್ವಾಗತಿಸಿದರು. ಸುರೇಶ್ ಶೆಟ್ಟಿ ದೈಹಿಕ ಶಿಕ್ಷಕರು ಪಡಿಬಾಗಿಲು ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ಸಮರ್ಪಿಸಿದರು. ನೆರದ ಸುಮಾರು 800 ಭಕ್ತಾದಿಗಳಿಗೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ವತಿಯಿಂದ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪಡಿಬಾಗಿಲು ಸಂಗಮ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಅತ್ಯಂತ ಶ್ರದ್ಧಾ- ಭಕ್ತಪೂರ್ವಕವಾಗಿ ಸಂಪೂರ್ಣ ಪರಿಸರವನ್ನು ಶುಚಿಗೊಳಿಸಿ, ಒಪ್ಪ ಓರಣವಾಗಿ ಅಲಂಕರಿಸಿ, ಬಂದಂತಹ ಎಲ್ಲ ಅತಿಥಿಗಳಿಗೆ ಉಪಾಹಾರ ಪಾನೀಯಗಳನ್ನು ವಿತರಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರೋತ್ಸಾಹ ನೀಡಿದರು.
ಪಡಿಬಾಗಿಲಿನಿಂದ ಮಡಿಯಾಲದ ಕಡೆಗೆ ಮುಂದುವರಿದ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳೊಂದಿಗಿನ ಶಿಲಾಮೆರವಣಿಗೆಯಲ್ಲಿ ಶ್ರೀಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಳಿಕೆ ವಲಯ ಹಾಗೂ ಶ್ರೀ ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದ ಮಹಿಳಾ ಪ್ರತಿನಿಧಿಗಳ ಪೂರ್ಣಕುಂಭ, ಬೊಲ್ನಾಡು ಭಗವತಿ ಕುಣಿತ ಭಜನಾ ತಂಡ, ಶ್ರೀ ಸ್ಕಂದ ಕುಣಿತ ಭಜನಾ ತಂಡ, ಚೆಂಡುಕಳ, ಶ್ರೀ ಕಾರ್ತಿಕೇಯ ಕುಣಿತ ಭಜನಾ ತಂಡ, ನೆಕ್ಕಿತಪುಣಿ, ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ, ದೇಲಂತಬೆಟ್ಟು, ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ, ಅನೆಪದವು, ಶ್ರೀ ಸತ್ಯಸಾಯಿ ಸೇವಾ ಸಮಿತಿ ಭಜನಾ ತಂಡ ಅಳಿಕೆ, ಹುಲಿಕುಣಿತ ತಂಡ ನೆಕ್ಕಿತಪುಣಿ, ಯಕ್ಷಗಾನ ವೇಷಧಾರಿಗಳಾದ ಪುಟಾಣಿ ವಿದ್ಯಾರ್ಥಿಗಳ ಸಮೂಹ ಮತ್ತು ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ, ಪುಣಚ ಇದರ ಸದಸ್ಯರ ಆಕರ್ಷಕ ಚೆಂಡೆ ವಾದನವು ಶಿಲಾಮೆರವಣಿಗೆಯ ಸೊಬಗನ್ನು ಮನಮೋಹಕಗೊಳಿಸಿತು. ಮೆರವಣಿಗೆಯಲ್ಲಿ ಸಾಗಿಬಂದ ಜನಸ್ತೋಮಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗ ದಳ ಚೆಂಡುಕಳ ಘಟಕ, ವ್ಯವಸಾಯ ಸೇವಾ ಪತ್ತಿನ ಸಹಕಾರಿ ಬ್ಯಾಂಕ್ ಅಳಿಕೆ ಹಾಗೂ ಜುಮ್ಮಾಮಸೀದಿ ಅಳಿಕೆ ಇವರೆಲ್ಲ ವತಿಯಿಂದ ಚೆಂಡುಕಳ, ಸತ್ಯಸಾಯಿವಿಹಾರ ಮತ್ತು ಬಾಲಕುಟೀರದಲ್ಲಿ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.




ಮಧ್ಯಾಹ್ನ 11.30ಕ್ಕೆ ದೇವಸ್ಥಾನದ ಪ್ರಾಂಗಣವನ್ನು ಪ್ರವೇಶಿಸಿದ ಶಿಲಾಮೆರವಣಿಗೆಗೆ ವೈಧಿಕ ವಿಧಿವಿಧಾನಗೊಂದಿಗೆ ಪೂಜೆ, ಆರತಿ ಇತ್ಯಾದಿಗಳನ್ನು ಅರ್ಚಕ ವೃಂದದವರು ನೆರವೇರಿಸಿಕೊಟ್ಟರು.
ಶಿಲಾಸ್ವಾಗತ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮವು ಮಧ್ಯಾಹ್ನ 12.20ಕ್ಕೆ ಶ್ರೀ ಗುರುದೇವ ದತ್ತ ಸಂಸ್ಥಾನಂ, ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರಿಂದ ಆಶೀರ್ವಚನದೊಂದಿಗೆ ಆರಂಭಗೊಂಡಿತು., ಕಾರ್ಯಕ್ರಮದ ಅಧ್ಯಕ್ಷರಾಗಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಕೆ. ಎಸ್. ಕೃಷ್ಣ ಭಟ್ ವಹಿಸಿಕೊಂಡಿದ್ದರು. , ಮುಖ್ಯ ಅತಿಥಿಗಳಾಗಿ ರಮೇಶ್ ಯೋಜನಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ವಲಯ, ಸಂಕಪ್ಪ ಶೇಕ, ಅಧ್ಯಕ್ಷರು ಆಡಳಿತ ಸಮಿತಿ, ಶಂಕರನಾರಾಯಣ ದೇವಸ್ಥಾನ, ಎರುಂಬು, ಸಿ. ಕುಶಾಲಪ್ಪ ಗೌಡ, ಅಧ್ಯಕ್ಷರು, ಬಂಟ್ವಾಳ ತಾಲೂಕು ಗೌಡರ ಯಾನೇ ಒಕ್ಕಲಿಗರ ಸಂಘ, ಸೀತಾರಾಮ ಶೆಟ್ಟಿ, ಸದಸ್ಯರು, ಅಳಿಕೆ ಗ್ರಾಮಪಂಚಾಯತ್, ಮಹೇಶ ಮಡಿಯಾಲ, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಚಂದ್ರಶೇಖರ ಭಟ್, ಅಧ್ಯಕ್ಷರು ಜೀಣೋದ್ಧಾರ ಸಮಿತಿ, ಗೋವಿಂದ ಪ್ರಕಾಶ ವದ್ವ, ಮತ್ತು ಸೂರ್ಯನಾಥ ಮಿತ್ತಳಿಕೆ, ಕಾರ್ಯಾಧ್ಯಕ್ಷರುಗಳು, ಜೀಣೋದ್ಧಾರ ಸಮಿತಿ, ಭಾಸ್ಕರ ಯಂ. ಮಡಿಯಾಲ, ಪ್ರಧಾನ ಕಾರ್ಯದರ್ಶಿ, ಜೀರ್ಣೋದ್ಧಾರ ಸಮಿತಿ, ಶ್ರೀ ಎ. ಪಿ. ಜಯರಾಮ ಮಣಿಯಾಣಿ, ಕೋಶಾಧಿಕಾರಿ, ಜೀರ್ಣೋದ್ದಾರ ಸಮಿತಿ ಇವರೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಯಂ ಮಡಿಯಾಲ ಸ್ವಾಗತ ಕೋರಿದರು. ಕೋಶಾಧಿಕಾರಿ ಎ. ಪಿ. ಜಯರಾಮ ಮಣಿಯಾಣಿ ಧನ್ಯವಾದ ಸಮರ್ಪಿಸಿದರು. ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಶಿಕ್ಷಕ ಅಶೋಕ ಕುಮಾರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು 1500 ಮಂದಿ ಭಕ್ತಾದಿಗಳಿಗೆ ಮಧ್ಯಾಹ್ನದ ಪ್ರಸಾದ ಭೋಜನೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿಯ ಜೊತೆ ಕಾರ್ಯದರ್ಶಿ ಚಂದ್ರಶೇಖರ ಮಡಿಯಾಲ ಮತ್ತು ಮನೆಯವರು ನೀಡಿದರು.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಅಳಿಕೆ, ಪಿಡಿಒ ಅಳಿಕೆ ಗ್ರಾಮ ಪಂಚಾಯತ್, ಅಧ್ಯಕ್ಷರು ಮತ್ತು ಸರ್ವಸದಸ್ಯರು ಕೇಪು ಗ್ರಾಮ ಪಂಚಾಯತ್, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳಿಕೆ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ವಿಟ್ಲ ಪಟ್ಟಣ ಪಂಚಾಯತ್, ಆರಕ್ಷಕ ನಿರೀಕ್ಷಕರು ಮತ್ತು ಸಿಬ್ಬಂಧಿ ವರ್ಗ ಆರಕ್ಷಕ ಠಾಣೆ. ವಿಟ್ಲ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶ್ರೀಸಾಯಿಕೃಷ್ಣ ಬಳಗ, ಮಡಿಯಾಲ, ಅಧ್ಯಕ್ಷರು ಮತ್ತು ಸರ್ವಸದಸ್ಯರು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ ಚೆಂಡುಕಳ ಘಟಕ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಯುವಕ ಮಂಡಲ ಚೆಂಡುಕಳ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ನವಚೇತನ ಯುವತಿ ಮಂಡಲ ಚೆಂಡುಕಳ, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ, ಅಧ್ಯಕ್ಷರು ಮತ್ತು ಸರ್ವಸದಸ್ಯರು ಸಂಗಮ ಯುವಕ ಮಂಡಲ, ಪಡಿಬಾಗಿಲು, ಯುವ ಜನ ಸೇವಾ ಟ್ರಸ್ಟ್, ದರ್ಭೆ ಉಕ್ಕುಡ, ಅಧ್ಯಕ್ಷರು ಹಾಗೂ ಸರ್ವಸದಸ್ಯರು ಆಡಳಿತ ಸಮಿತಿ ಪ್ರಾಥಮಿಕ ಶಾಲೆ ಪಡಿಬಾಗಿಲು, ಅಧ್ಯಕ್ಷರು ಮತ್ತುಸರ್ವಸದಸ್ಯರು ವ್ಯವಸಾಯ ಸೇವಾ ಪತ್ತಿನ ಸಹಕಾರಿ ಸಂಘ, ಅಳಿಕೆ – ಹೀಗೆ ಹಲವಾರು ಸಂಘಸಂಸ್ಥೆಗಳ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು