ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಂಟ್ವಾಳ ಪ್ರಥಮ, ರಾಮಕುಂಜೇಶ್ವರ ಪ್ರೌಢ ಶಾಲೆ ರಾಮಕುಂಜ ದ್ವಿತೀಯ





ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ ಆಶೋಕನಗರ, ಅಳಕೆಮಜಲು 42ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವ ಪ್ರಯುಕ್ತ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಂಟ್ವಾಳ, ದ್ವಿತೀಯ ರಾಮಕುಂಜೇಶ್ವರ ಪ್ರೌಢ ಶಾಲೆ ರಾಮಕುಂಜ, ತೃತೀಯ ಭಗವತಿ ಉಚ್ಚಿಲ ಪ್ರೌಢ ಶಾಲೆ , ಚತುರ್ಥ ಸರಕಾರಿ ಪ್ರೌಢಶಾಲಾ ಮಂಚಿ ಬಹುಮಾನವನ್ನು ಪಡೆದುಕೊಂಡಿದೆ.




ಅತ್ಯುತ್ತಮ ದಾಳಿಗಾರ ಭಗವತಿ ಉಚ್ಚಿಲ ಪ್ರೌಢ ಶಾಲೆಯ ವಿದ್ಯಾರ್ಥಿ ಅಭಿಶ್, ಆಲ್ ರೌಂಡರ್ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಂಟ್ವಾಳ ವಿದ್ಯಾರ್ಥಿ ಶಾಹಿಲ್, ಉತ್ತಮ ಹಿಡಿತಗಾರನಾಗಿ ರಾಮಕುಂಜೇಶ್ವರ ಪ್ರೌಢ ಶಾಲೆ ರಾಮಕುಂಜ ಅಜಯ್ ಬಹುಮಾನವನ್ನು ಪಡೆದಿರುತ್ತಾರೆ.
ಪಂದ್ಯಾಟವನ್ನು ಸುದೀರ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.