


ಪೆರ್ನೆ: ಶ್ರೀ ರಾಮಚಂದ್ರ ಪ್ರೌಢಶಾಲೆ, ಅಯೋಧ್ಯನಗರ, ಪೆರ್ನೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ದ. ಕ /ಉಡುಪಿ /ಚಿಕ್ಕಮಂಗಳೂರು/ಉತ್ತರಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಜ್ಞಾನವರ್ಷಿಣಿ ಮತ್ತು ಜ್ಞಾನದರ್ಶಿನಿ ಪುಸ್ತಕಗಳ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶೇಖರ್ ರೈ ವಹಿಸಿ, ಮಾತನಾಡಿ “ನೈತಿಕ ಮೌಲ್ಯ ವೃದ್ಧಿಸಲು ಓದು ಮುಖ್ಯ ಇದಕ್ಕಾಗಿ ಪುಸ್ತಕಗಳು ಪೂರಕ, ಆ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡಬೇಕು” ಎಂದು ತಿಳಿಸಿದರು. ಶಾಂತಿವನ ಟ್ರಸ್ಟ್ ನ ನಿರ್ದೇಶಕ ಡಾ. ಐ .ಶಶಿಕಾಂತ ಜೈನ್‌ರವರು ಅತಿಥಿಗಳಾಗಿ ಭಾಗವಹಿಸಿ “ಬೆಳಕು ಜ್ಞಾನವನ್ನು ಕೊಡುವಂತೆ ಮಸ್ತಕದಲ್ಲಿನ ಜ್ಞಾನಕ್ಕಾಗಿ ಸ್ಪರ್ಧೆಗಳ ಆಯೋಜನೆಯಾಗಿದೆ. ಈ ಬಾರಿ ರಾಜ್ಯ ಮಟ್ಟದ ವರೆಗಿನ ಸ್ಪರ್ಧೆಗಳ ಆಯೋಜನೆಯಿದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಮಚಂದ್ರ ಪ್ರೌಢಶಾಲೆ, ಅಯೋಧ್ಯನಗರ, ಪೆರ್ನೆಯ ನಿವೃತ್ತ ಪ್ರೌಢ ಶಾಲಾ ಮುಖ್ಯ್ಯೊಪಧ್ಯಾಯ ತಾರಾನಾಥ ಶೆಟ್ಟಿ, ಮಾಣಿ ಮತ್ತು ಬಾಲ್ತಿಲ ಕ್ಲಸ್ಟರ್ ಸಿ ಆರ್ ಪಿ ಸತೀಶ್ ರಾವ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಯೋಜನೆಯಲ್ಲಿ ಸಹಕರಿಸಿದ ಶಾಲಾ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ. ಆರ್ ಸ್ವಾಗತಿಸಿದರು. ಮುಖ್ಯಉಪಧ್ಯಾಯ ಸತ್ಯನಾರಾಯಣ ರೈ ವಂದಸಿದರು. ವಿಜ್ಞಾನ ಶಿಕ್ಷಕಿ ಆಶಲತಾ ನಿರೂಪಿಸಿದರು.