- Advertisement -
- Advertisement -


ಉಡುಪಿ: ಮುಂಬೈಯಿಂದ ತರಿಸಿಕೊಂಡ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಉಳ್ಳೂರು ಗ್ರಾಮದ ಕೆಜಿ ರೋಡ್ ಕ್ರಾಸ್ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬ್ರಹ್ಮಾವರದ ಉಳ್ಳೂರು ನಿವಾಸಿ ಸತ್ಯರಾಜ್ ಯಾನೆ ತಂಬಿ ಅಣ್ಣ (32), ಕೃಷ್ಣ (43), ಶಕಿಲೇಶ್ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ 8,11,040 ರೂ. ಮೌಲ್ಯದ 10 ಕೆ.ಜಿ. 138 ಗ್ರಾಂ ಗಾಂಜಾ, 1,570ರೂ. ನಗದು, ಮೂರು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 8,42,610ರೂ. ಎಂದು ಅಂದಾಜಿಸಲಾಗಿದೆ. ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ಪ್ರಶಾಂತ್, ಮಾಯಪ್ಪ ಪರಶುರಾಮ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
- Advertisement -