


ಮಂಗಳೂರು : ಹರೇಕಳ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಗಾಯಾಳು ಶರತ್ ಕುಮಾರ್ ಭೇಟಿಯಾಗಿ ಧೈರ್ಯ ತುಂಬಿದ ಕಿಶೋರ್ ಕುಮಾರ್, ಮತಾಂಧ ಗುಂಪು ನಡೆಸಿರುವ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗೃಹ ಇಲಾಖೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ಹಿಂದೂ ಸಮಾಜಕ್ಕೆ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.ಶರತ್ ಕುಮಾರ್ ಮೇಲೆಯೇ ಕೇಸು ದಾಖಲಿಸುವ ಹುನ್ನಾರವೂ ನಡೆಯುತ್ತಿದೆ. ಗೃಹ ಸಚಿವರು ಈ ಕುರಿತು ತಕ್ಷಣವೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಸಮಾಜಕ್ಕೆ ಶಾಂತಿಗೆ ಶಾಂತಿ, ಕ್ರಾಂತಿಗೆ ಕ್ರಾಂತಿ ಮಾಡಿ ಗೊತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂಗಳ ಮೇಲಿನ ದಬ್ಬಾಳಿಕೆ ತಡೆಯದೇ ಹೋದರೆ, ಹಿಂದೂ ಸಮಾಜ ಯಾವುದೇ ಹೋರಾಟಕ್ಕೂ ಸಿದ್ಧವಾಗಿದೆ. ಹರೇಕಳ ಭಾಗದಲ್ಲಿ ಅಲ್ಪಸಂಖ್ಯಾತರಾದ ಕಾರಣಕ್ಕೆ ಹಿಂದೂ ಸಮಾಜ ಸುಮ್ಮನಿರದು. ಕೋಮುಗಲಭೆ ಷಡ್ಯಂತ್ರವನ್ನ ಸರಕಾರ ನಿಯಂತ್ರಿಸಬೇಕು. ಇಡೀ ಹಿಂದೂ ಸಮಾಜ ಹರೇಕಳ, ಪಾವೂರು ಹಿಂದೂಗಳ ಜೊತೆಗಿರಲಿದೆ. ಶಾಂತಿಯುತ ಸಮಾಜ ಬೇಕಿದ್ದರೆ ಹಿಂದೂಗಳು ಅಷ್ಟೇ ಶಾಂತಿಯುತರಾಗಿ ಬದುಕುತ್ತಾರೆ. ಅಶಾಂತಿ ಸೃಷ್ಟಿಸಿ ಕೋಮುಗಲಭೆ ಹುನ್ನಾರ ಮಾಡಿದ್ದಲ್ಲಿ ಅದನ್ನ ಹತ್ತಿಕ್ಕುವುದು ಹಿಂದೂ ಸಮಾಜಕ್ಕೆ ಗೊತ್ತಿದೆ. ಇದು ಮುಸಲ್ಮಾನ ಸಮುದಾಯಕ್ಕೆ ನಮ್ಮ ಎಚ್ಚರಿಕೆ ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.