Thursday, November 12, 2026
spot_imgspot_img
spot_imgspot_img

ಕುಂದಾಪುರ: ಕೋಡಿ ಬೀಚ್‌ನಲ್ಲಿ ಮೂವರು ಸಹೋದರರು ನೀರುಪಾಲು: ಇಬ್ಬರು ಮೃತ್ಯು

- Advertisement -
- Advertisement -

ಕುಂದಾಪುರ: ಮನೆಯವರೊಂದಿಗೆ ಬೀಚ್‌ಗೆ ತೆರಳಿದ್ದ ಮೂವರು ಸಹೋದರರ ಪೈಕಿ ಇಬ್ಬರು ನೀರುಪಾಲಾಗಿ, ಓರ್ವನನ್ನು ರಕ್ಷಣೆ ಮಾಡಿರುವ ಘಟನೆ ಶನಿವಾರ ಸಂಜೆ ಕೋಡಿ ಬೀಚ್ ನಲ್ಲಿ ನಡೆದಿದೆ.

ಅಂಪಾರು ಗ್ರಾಮದ ಮೂಡುಬಗೆಯ ದಾಮೋದರ ಪ್ರಭು  ಹಾಗೂ ಚಿತ್ರಾಕಾಲ ಪ್ರಭು ದಂಪತಿಯ ಪುತ್ರರಾದ ದರ್ಶನ್‌ (18) ಧನರಾಜ್‌ (23) ಹಾಗೂ ಧನುಷ್‌ ನೀರಿಗಿಳಿದಾಗ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ದರ್ಶನ್, ಧನರಾಜ್‌ ನೀರುಪಾಲಾಗಿದ್ದು, ಧನುಷ್‌ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!