Tuesday, July 21, 2026
spot_imgspot_img
spot_imgspot_img

ಕೇಪು: ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ವತಿಯಿಂದ ಕೇಪು ಶ್ರೀ ಉಳಾಲ್ತಿ ದೇವಸ್ಥಾನದಲ್ಲಿ ಶ್ರಮದಾನ

- Advertisement -
- Advertisement -

ಕೇಪು: ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ವತಿಯಿಂದ ಕೇಪು ಶ್ರೀ ಉಳಾಲ್ತಿ ದೇವಸ್ಥಾನದಲ್ಲಿ ಶ್ರಮದಾನ ನಡೆಸಲಾಯಿತು.

ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ಡಿ. 16 ರಂದು ನಡೆಯಲಿದ್ದು, ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಕಜಂಬು ಉತ್ಸವ ನಡೆಯುವ ಮಕ್ಕಳ ಸ್ಥಾನಘಟ್ಟದಲ್ಲಿ ಶ್ರಮದಾನ ನಡೆಸಲಾಯಿತು.

ಸತತ 12 ವರ್ಷಗಳಿಂದ ಕೇಪು ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ವತಿಯಿಂದ ಈ ಕ್ಷೇತ್ರದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ಶ್ರಮದಾನ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ. ಅದಲ್ಲದೇ ಮಕ್ಕಳ ಕಜಂಬು ಉತ್ಸವದ ಸಂದರ್ಭದಲ್ಲಿ ಮಕ್ಕಳನ್ನು ಸ್ನಾನಘಟ್ಟದಲ್ಲಿ ಸ್ನಾನ ಮಾಡಿಸುವ ಎಲ್ಲಾ ಸೇವೆಗಳಲ್ಲಿ ಕೇಪು ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಆ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರಮದಾನದಲ್ಲಿ ಸೇವಾ ಸಮಿತಿ ಯ ಎಲ್ಲಾ ಸರ್ವ ಸದ್ಯಸರು, ಮಕ್ಕಳು ಭಾಗಿಯಾಗಿದ್ದರು.

- Advertisement -

Related news

error: Content is protected !!