Saturday, June 27, 2026
spot_imgspot_img
spot_imgspot_img

ಕಾಳುಮೆಣಸು ಕೊಯ್ಯುವ ವೇಳೆ ಆಯತಪ್ಪಿ ಬಿದ್ದ ವ್ಯಕ್ತಿ ಮೃತ್ಯು

- Advertisement -
- Advertisement -

ಕಾಳುಮೆಣಸು ಕೊಯ್ಯುವ ವೇಳೆ ಆಯತಪ್ಪಿ ಬಿದ್ದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಕನಕಮಜಲು ಗ್ರಾಮದ ಕೊಲ್ಲಂತಡ್ಕದಲ್ಲಿ ಸಂಭವಿಸಿದೆ.ಕನಕಮಜಲು ಗ್ರಾಮದ ಕೊಲ್ಲಂತಡ್ಕದ ಜಗನ್ನಾಥ ಅವರು ಜ.27ರಂದು ಬೆಳಿಗ್ಗೆ ತಮ್ಮ ಮನೆಯ ಅಂಗಳದಲ್ಲಿದ್ದ ಮರದಲ್ಲಿ ಕಾಳುಮೆಣಸು ಕೊಯ್ಯಲು ಏಣಿ ಇರಿಸಿ, ಹತ್ತಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದ ಅವರನ್ನು ತಕ್ಷಣ ಮನೆಯವರು ವಾಹನದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆತಂದರೆನ್ನಲಾಗಿದೆ. ಆದರೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಗೆ ಕರೆತರುವ ವೇಳೆ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರೆಂದು ತಿಳಿದುಬಂದಿದೆ.

ಜಗನ್ನಾಥ ಅವರು ಹೆಚ್ಚಾಗಿ ಮರದ ಕೆಲಸಕ್ಕೆ ಹೋಗುತ್ತಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೀಲಾವತಿ, ಪುತ್ರರಾದ ರಮೇಶ, ಶಶಿಧರ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!