Tuesday, July 1, 2025
spot_imgspot_img
spot_imgspot_img

ಮಹಾಕುಂಭಮೇಳದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲ.ರೂ. ಪರಿಹಾರ

- Advertisement -
- Advertisement -

ಪ್ರಯಾಗರಾಜ್‌: ಮಹಾಕುಂಭಮೇಳದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟು 60 ಮಂದಿ ಗಾಯಗೊಂಡ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸಲಾಗಿದೆ. ಜನಜಂಗುಳಿ ಮತ್ತು ವಾಹನ ದಟ್ಟಣೆ ನಿಭಾಯಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾರ್ಗಸೂಚಿ ನೀಡಿದ್ದು, ಸ್ನಾನಕ್ಕೆ ತೆರಳುವವರನ್ನು ತಡೆದಿಡಲು ಅಲ್ಲಲ್ಲಿ ಹೋಲ್ಡಿಂಗ್ ಪಾಯಿಂಟ್ ರಚಿಸಲು ಮತ್ತು ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಲು ಸೂಚಿಸಿದ್ದಾರೆ.ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಈ ದುರಂತ ಘಟನೆಯ ಬಗ್ಗೆ ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಜನವರಿ ಇಂದು ಮಹಾಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ. ಮಹಾಕುಂಭಮೇಳದಲ್ಲಿ 60 ಜನರು ಗಾಯಗೊಂಡಿದ್ದಾರೆ ಮತ್ತು 30 ಜನರು ಸಾವನ್ನಪ್ಪಿದ್ದಾರೆ ಎಂದು ಸಿಎಂ ಆದಿತ್ಯನಾಥ್‌ ಹೇಳಿದ್ದಾರೆ.ಪ್ರಯಾಗ್‌ರಾಜ್‌ನಲ್ಲಿ 36 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಮಂಗಳವಾರ ಸಂಜೆ 7 ಗಂಟೆಯಿಂದಲೇ ಪ್ರಯಾಗ್‌ರಾಜ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಭಕ್ತರ ಆಗಮನಕ್ಕಾಗಿ ನಾವು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದ್ದೆವು. ಆದರೂ ಜನರ ದಟ್ಟಣೆಅಪಾರವಾಗಿತ್ತು. ನಿನ್ನೆ ಒಂದೇ ದಿನ ಪ್ರಯಾಗ್‌ರಾಜ್‌ಗೆ 8 ಕೋಟಿ ಜನ ಬಂದಿದ್ದರು. ಹತ್ತಿರದ ಜಿಲ್ಲೆಗಳ ಜನರು ಇಲ್ಲಿಗೆ ಬರುವುದನ್ನು ಸಹ ತಡೆಯಲಾಯಿತು. ಇಷ್ಟೊಂದು ಭಾರಿ ಒತ್ತಡ ಇದೇ ಮೊದಲ ಬಾರಿಗೆ ಕಂಡುಬಂದಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.ನ್ಯಾಯಾಂಗ ತನಿಖೆ ನಡೆಸಿ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ನ್ಯಾಯಮೂರ್ತಿ ಹರ್ಷ ಕುಮಾ‌ರ್, ಮಾಜಿ ಪೊಲೀಸ್ ಮಹಾನಿರ್ದೇಶಕರಾದ ವಿ.ಕೆಗುಪ್ತಾ, ನಿವೃತ್ತ ಮೂವರು ಸದಸ್ಯರನ್ನೊಳಗೊಂಡ ಆಯೋಗ ರಚನೆ ಮಾಡಿದೆ.ಮೃತಪಟ್ಟವರ ಪೈಕಿ ಕರ್ನಾಟಕದ ನಾಲ್ವರು, ಅಸ್ಸಾಂನ ಒಬ್ಬರು, ಗುಜರಾತ್‌ನ ಒಬ್ಬರು ಇದ್ದಾರೆ. ಕೆಲವು ಗಾಯಗೊಂಡ ಭಕ್ತರನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ಹೇಳಿದ್ದಾರೆ.

- Advertisement -

Related news

error: Content is protected !!