Thursday, July 3, 2025
spot_imgspot_img
spot_imgspot_img

ತಿರುಪತಿ ಲಡ್ಡು ವಿವಾದ ಪ್ರಕರಣ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಬಿಐ ನೇತೃತ್ವದ ತನಿಖಾ ತಂಡ

- Advertisement -
- Advertisement -

ತಿರುಪತಿ ತಿರುಮಲ ಲಡ್ಡು ಪ್ರಸಾದ ತಯಾರಿಸಲು ಬಳಸುವ ಹಸುವಿನ ತುಪ್ಪದಲ್ಲಿ ಕಲಬೆರಕೆ ಮಾಡಿದ ಆರೋಪದ ಮೇಲೆ ಸಿಬಿಐ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ.

ಬಂಧಿತರಲ್ಲಿ ಭೋಲೆ ಬಾಬಾ ಡೈರಿ (ರೂರ್ಕಿ, ಉತ್ತರಾಖಂಡ್) ಮಾಜಿ ನಿರ್ದೇಶಕರಾದ ಬಿಪಿನ್ ಜೈನ್ ಮತ್ತು ಪೊಮಿಲ್ ಜೈನ್, ವೈಷ್ಣವಿ ಡೈರಿ (ಪೂನಂಬಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದುಂಡಿಗಲ್) ಎಂಡಿ ರಾಜು ರಾಜಶೇಖರನ್ ಸೇರಿದ್ದಾರೆ.ತನಿಖಾಧಿಕಾರಿಗಳು ಅಪರಾಧ ಸಂಖ್ಯೆ ೪೭೦/೨೪ ರ ಅಡಿಯಲ್ಲಿ ಆರೋಪಿಗಳನ್ನು ತಿರುಪತಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ತುಪ್ಪ ಪೂರೈಕೆಯ ಸಮಯದಲ್ಲಿ ಗಂಭೀರ ಉಲ್ಲಂಘನೆಗಳು ಕಂಡುಬಂದಿದ್ದು, ಪ್ರತಿ ಹಂತದಲ್ಲೂ ಅಕ್ರಮಗಳು ನಡೆದಿವೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.ವೈಷ್ಣವಿ ಡೈರಿಯ ಪ್ರತಿನಿಧಿಗಳು ತುಪ್ಪ ಪೂರೈಕೆಗಾಗಿ ಎಆರ್ ಡೈರಿ ಹೆಸರಿನಲ್ಲಿ ಟೆಂಡರ್ ಪಡೆದರು.

- Advertisement -

Related news

error: Content is protected !!