Friday, September 11, 2026
spot_imgspot_img
spot_imgspot_img

ಮಹಿಳಾ ಅಧಿಕಾರಿಯೊಬ್ಬರ ಲೈಂಗಿಕ ಕಿರುಕಳ

- Advertisement -
- Advertisement -

ಮಂಗಳೂರು: ಸಿಐಎಸ್‌ಎಫ್ ಮಹಿಳಾ ಅಧಿಕಾರಿಯೊಬ್ಬರು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ.ಮಂಗಳೂರಿನ ರಾವ್ ಸರ್ಕಲ್ ಬಳಿಯ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಗಾಜಿಪುರದ ಅಭಿಷೇಕ್ ಸಿಂಗ್(40) ಎಂದು ಪತ್ತೆಹಚ್ಚಲಾಗಿದೆ.

ಅಭಿಷೇಕ್ ಸಿಂಗ್ ಆತ್ಮಹತ್ಯೆ ಮಾಡಿಕಳ್ಳುವ ಮುಂಚಿತವಾಗಿ ವಿಡಿಯೋ ರೆಕಾರ್ಡ್ ನಲ್ಲಿ ಸಿಐಎಸ್‌ಎಫ್‌ ಸಹಾಯಕ ಕಮಾಂಡೆಂಟ್ ಮೋನಿಕಾ ಸಿಹಾಗ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾರೆ ಎಂಬುವುದನ್ನು ಇನ್ಫೋಾ ಗ್ರಾಮ್ ನಲ್ಲಿ ಪೋಸ್‌ಟ್ ಮಾಡಿ ಆರೋಪಿಸಿದ್ದಾರೆ.ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಕೆಲವು ದಿನಗಳ ಹಿಂದೆ ಸಹೋದ್ಯೋಗಿಗಳೊಂದಿಗೆ ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಅವರು ನಗರದ ರಾವ್ ಮತ್ತು ರಾವ್ ವೃತ್ತದ ಬಳಿ ಇರುವ ಲಾಡ್‌ಜ್‌ವೊಂದರಲ್ಲಿ ತಂಗಿದ್ದರು. ಈಗ ಅದೇ ಲಾಡ್ಜ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಸಾವಿಗೂ ಮುನ್ನ ವಿಡಿಯೋ ಪೋಸ್ಟ್ ಮಾಡಿರುವ ಅಭಿಷೇಕ್, ಮೋನಿಕಾ ಸಿಹಾಗ್‌ ಈಗಾಗಲೇ ವಿವಾಹಿತೆಯಾಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ತನ್ನೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಅಭಿಷೇಕ್ ಸಿಂಗ್ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!