- Advertisement -
- Advertisement -



ಬಿಹಾರ: ಯುವತಿಯೊಬ್ಬಳ ಕಾಲಿಗೆ 12 ಮೊಳೆಗಳನ್ನು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ.ಮೃತ ಮಹಿಳೆ ಯಾರೆಂದು ಯಾರಿಗೂ ಗುರಿತಿಸಲಾಗಿಲ್ಲ.
ಯುವತಿಯು ಕೆಂಪು ಬಣ್ಣದ ನೈಟಿ ಧರಿಸಿದ್ದು, ಒಂದು ಕೈಯಲ್ಲಿ ಬ್ಯಾಂಡೇಜ್ ಕಟ್ಟಿತ್ತು. ಇದನ್ನು ವೀಕ್ಷಿಸಿದ ಜನರಲ್ಲಿ ಚರ್ಚೆ ಆರಂಭವಾಗಿದೆ.ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿ ಹುಡುಗಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.ಪ್ರೀತಿ-ಪ್ರೇಮದ ಪ್ರಕರಣದಿಂದಾಗಿ ಈ ರೀತಿಯಾಗಿ ಕೊಲೆಯಾಗಿರುವ ಸಾಧ್ಯತೆಯೂ ಇದೆ. ತನಿಖೆಯ ನಂತರವೇ ಕೊಲೆಗೆ ನಿಜವಾದ ಕಾರಣ ಸ್ಪಷ್ಟವಾಗಲಿದೆ.
- Advertisement -








