Saturday, July 5, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನ

- Advertisement -
- Advertisement -

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಮಾರ್ಚ್ 9-3-2025ನೇ ರವಿವಾರದಿಂದ 16-3-2025ನೇ ರವಿವಾರದವರೆಗೆ ಶ್ರೀ ಕೃಷ್ಣ ಎನ್‌. ಉಚ್ಚಿಲ್‌ರವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.

ದಿನಾಂಕ: 10-3-2025ನೇ ಸೋಮವಾರ ವಾಸ್ತು ಪೂಜೆ ಬಳಿಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ, ನಾಮ ಸಂಕೀರ್ತನೆ ಬಳಿಕ ಪ್ರಸಾದ ಭೋಜನ ನಡೆದು ಬಳಿಕ ಸಂಜೆ ಲಕ್ಷ್ಮಣ್‌ ವೈದರ್‌ರವರಿಂದ ಹಾಗೂ ಟಿ.ವಿ ಮಧುಸೂದನನ್‌ ಪಣಿಕ್ಕರ್‌, ಜ್ಯೋತಿಷ್ಯಾಲಯಂ ಕಾಳಿಕ್ಕಡವುರವರಿಂದ ಧಾರ್ಮಿಕ ಪ್ರವಚನ ನಡೆಯಿತು. ಬೊಲ್ನಾಡು ಮಾತೃಮಂಡಳಿ ಹಾಗೂ ಚಿಣ್ಣರ ಬಳಗದವರಿಂದ ಜಾನಪದ ನೃತ್ಯ ಹಾಗೂ ತಿರುವಾದಿರಂ ನಡೆಯಿತು. ಗಾನ ನಿಧಿ ಅಳಿಕೆ ದಿವ್ಯ ನಿಧಿ ರೈ ಎರುಂಬು, ಮತ್ತು ತಂಡದವರಿಂದ “ಸ್ವರ ಸಮರ್ಪಣೆ” ಸಂಗೀತ ಕಾರ್ಯಕ್ರಮ ಬಳಿಕ ಮೈರ ಪುಗರ್ತೆ ತಂಡದವರಿಂದ ಮಂತ್ರದೇವತೆ ನಾಟಕ ನಡೆಯಿತು.

ದಿನಾಂಕ: 11-3-2025ನೇ ಮಂಗಳವಾರ ಸಂಜೆ ತಂತ್ರಿಗಳ ಆಗಮನ ಬಳಿಕ ದೇವತಾ ಪ್ರತಿಷ್ಠೆ, ಸ್ವಸ್ತಿ ಪುಣ್ಯಾಹ, ಖನನಾದಿ, ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಅಂಕುರಾರೋಹಣ ನಡೆಯಿತು. ಬಳಿಕ ಭಜನೆ ನಡೆದು ಪ್ರಸಾದ ಭೋಜನ ನಡೆಯಿತು. ಉಳ್ಳಾಲ ಎಚ್‌ಎಸ್‌ಎಂ ಮಹಿಳಾ ಪಿಯು ಕಾಲೇಜು ಪ್ರಾಂಶುಪಾಲ ಡಾ||ಸಂಗೀತ ಕಿಶೋರ್‌ ಇವರಿಂದ ಧಾರ್ಮಿಕ ಪ್ರವಚನ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾನಕೋಗಿಲೆ ಪುತ್ತೂರು ಚಂದ್ರಶೇಖರ್‌ ಹೆಗ್ಡೆ ಸಾರಥ್ಯದ ಪುನೀತ್‌‌ ಆರ್ಕೆಸ್ಟ್ರಾ ಪುತ್ತೂರು ಮತ್ತು ಬಳಗದವರಿಂದ “ಭಕ್ತಿನಿನಾದ” ರಸಮಂಜರಿ ಕಾರ್ಯಕ್ರಮ ನಡೆಯಿತು. ಸಿಂಗಾರಿ ಮೇಳ ಹಾಗೂ ಸಾಂಸ್ಕೃತಿಕ ಕಲಾ ಬೈಭವ ಬಳಿಕ ವಿಠಲ ನಾಯಕ್‌ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆದು ಬಳಿಕ ಕುಸಲ್ದಾ ಕಲಾವಿದರು ಮಂಗಳೂರು ಅಭಿನಯಿಸುವ “ಒರಿಯಾಂಡಲಾ ಸರಿಬೋಡು!” ನಾಟಕ ನಡೆಯಿತು.

ದಿನಾಂಕ: 12-3-2025ನೇ ಬುಧವಾರ 108 ತೆಂಗಿನಕಾಯಿ ಗಣಪತಿ ಹೋಮ ನಡೆದು ಮಧ್ಯಾಹ್ನ ದುರ್ಗಾಪೂಜೆ, ಮಧ್ಯಾಹ್ನಪೂಜೆ, ಅಂಕುರಪೂಜೆ ನಡೆದು ಬಳಿಕ ಪ್ರಸಾದ ಬೋಜನ ನಡೆಯಿತು. ಸಂಜೆ ತ್ರಿಕಾಲಪೂಜೆ ಪ್ರಾರಂಭವಾಗಿ ರಾತ್ರಿ ದುರ್ಗಾಪೂಜೆ, ಅಂಕುರಪೂಜೆ ನಡೆಯಿತು. ಸುಜ್ಞಾನ ಮಹಿಳಾಮಂಡಳಿ ಮತ್ತು ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದು ಬಳಿಕ ವಿದ್ಯಾಭೂಷಣ ಇವರಿಂದ ಭಕ್ತಿಗಾನಸುಧಾ ನಡೆಯಿತು.

ದಿನಾಂಕ: 13-3-2025ನೇ ಗುರುವಾರ ಬೆಳಿಗ್ಗೆ ಗಣಪತಿಹೋಮ, ಅಂಕುರಪೂಜೆ, ತ್ರಿಕಾಲಪೂಜೆ ಬಳಿಕ ಪೂರ್ಣಗ್ರಹಶಾಂತಿ ಹೋಮ, ಅಂಕುರಪೂಜೆ ನಡೆಯಿತು. ಮಧ್ಯಾಹ್ನ ಪೂಜೆ ನಡೆದು ಪ್ರಸಾದ ಭೋಜನ ನಡೆಯಿತು. ರಾತ್ರಿ ದುರ್ಗಾಪೂಜೆ, ಅಂಕುರ ಪೂಜೆ ನಡೆಯಿತು. ಸಂಜೆ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದವರಿಂದ ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಿತು.

ದಿನಾಂಕ: 14-3-2025ನೇ ಶುಕ್ರವಾರ ಬೆಳಿಗ್ಗೆ ಗಣಪತಿಹೋಮ, ತ್ರಿಕಾಲಪೂಜೆ, ಅಂಕುರಪೂಜೆ ನಡೆದು ಶ್ರೀ ಚಂಡಿಕಾ ಹವನ ನಡೆದು ದುರ್ಗಾಪೂಜೆ, ಮಧ್ಯಾಹ್ನ ಅಂಕುರಪೂಜೆ, ಶ್ರೀ ಚಂಡಿಕಾ ಹವನ ಪೂರ್ಣಾಹುತಿ ಬಳಿಕ ಪ್ರಸಾದ ಭೋಜನ ನಡೆಯಿತು. ರಾತ್ರಿ ದುರ್ಗಾಪೂಜೆ, ಅಂಕುರಪೂಜೆ, ನೂತನ ಬಿಂಬಗಳ ಜಲಾಧಿವಾಸ ನಡೆಯಿತು. ಸಂಜೆ ಕಲಾಸಾರಥಿ ತೋನ್ಸೆ ಪುಷ್ಕಳಕುಮಾರ್ ಹಾಗೂ ಬಳಗದವರಿಂದ ಭಕ್ತಿ-ಭಾವ, ಜಾನಪದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದಿನಾಂಕ: 15-3-2025ನೇ ಶನಿವಾರ ಬೆಳಿಗ್ಗೆ ಗಣಪತಿಹೋಮ, ತ್ರಿಕಾಲಪೂಜೆ, ಅಂಕುರ ಪೂಜೆ, ಶಯ್ಯಾಪೂಜೆ, ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶಪೂಜೆ ಬಳಿಕ ಮಧ್ಯಾಹ್ನಅಂಕುರಪೂಜೆ, ದುರ್ಗಾಪೂಜೆ ನಡೆದು ಪ್ರಸಾದ ಭೋಜನ ನಡೆಯಿತು. ರಾತ್ರಿ ಧ್ಯಾನಾಧಿವಾಸ, ದುರ್ಗಾಪೂಜೆ ಅಧಿವಾಸ ಹೋಮ ನಡೆಯಿತು. ಬಳಿ ರಾತ್ರಿ ರಿಂದ ಜಗದೀಶ್ ಪುತ್ತೂರು ಇವರಿಂದ ಭಕ್ತಿಗಾನ ಸುಧೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದಿನಾಂಕ: 16-3-2025ನೇ ಆದಿತ್ಯವಾರ ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪರಿವಾರ ದೈವಗಳ ಕಲಶಪೂಜೆ ನಡೆಯಿತು. ಬಳಿಕ ವೃಷಭಲಗ್ನದಲ್ಲಿ ಭಂಡಾರ ಕ್ಷೇತ್ರದಲ್ಲಿ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪೀಠ ಪ್ರತಿಷ್ಠೆ ನಡೆದು ಪ್ರಸಾದ ಭೋಜನ ನಡೆಯಿತು. ಕರ್ಕಾಟಕ ಲಗ್ನದಲ್ಲಿ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಧ್ವಜ ಪ್ರತಿಷ್ಠೆ, ತಂಬಿಲ, ಮಹಾಪೂಜೆ ನಡೆಯಿತು.

ಸಂಜೆ ಕೃಷ್ಣ ಎನ್. ಉಚ್ಚಿಲ್‌‌ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಕಾರ್ನವರ್, ಏರಿಯಾಕೋಟ, ಭಗವತೀ ಕ್ಷೇತ್ರ ,ಗೋಪಾಲ ಬೆಳ್ಚಪ್ಪಾಡ ಮೂಡಾಯಿ ಬೆಟ್ಟು, ಉಪ್ಪಳ ಕ್ಷೇತ್ರ , ಕಣ್ಣ ಕಲೇಕಾರರು ಕನಿಲ ಭಗವತೀ ಕ್ಷೇತ್ರ, ಉದ್ಯಮಿ ಉಮೇಶ ಬೆಂಜನಪದವು, 17 ಭಗವತೀ ಕ್ಷೇತ್ರಗಳ ಮೂಪತಿಯರು, ಕರಾಟೆ ತರಬೇತುದಾರ ಮಾಧವ ಸಿಂಹಮೂಲೆ, ಚಂದ್ರಾವತಿ ರೈಲು ಅವಗಡ ತಪ್ಪಿಸಿದವರು, ಸತೀಶ ಬಿ.ಎಂ ಗಿಂಡಿ, ಕನಿಲ ಭಗವತಿ ಕ್ಷೇತ್ರ, ಧಾರ್ಮಿಕ ಕಾರ್ಯ, ಸಮಾಜ ಸೇವಕ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬಾಬು ಪಿಲಾರ್, ಯೋಗಪಟು ಅಶ್ವೀಜ, ವೈಶಾಖ್, ಹೆಬ್ಬಾವಿನಿಂದ ರಕ್ಷಣೆ, ಅಂತರ್‌ರಾಷ್ಟ್ರೀಯ ಈಜುಪಟು ಅಮನ್‌ರಾಜ್, ಕ್ರೀಡಾಪಟು (Long jump) ಹರಿಪ್ರಿಯಾ ಇವರನ್ನು ಸನ್ಮಾನಿಸಲಾಯಿತು.

- Advertisement -

Related news

error: Content is protected !!