Wednesday, June 17, 2026
spot_imgspot_img
spot_imgspot_img

ಅಮೆರಿಕಾದಲ್ಲಿ ಗುಜರಾತ್‌ ಮೂಲದ ತಂದೆ ಮಗಳ ಗುಂಡಿಕ್ಕಿ ಹತ್ಯೆ; ಶೂಟರ್‌ ಅರೆಸ್ಟ್‌..!

- Advertisement -
- Advertisement -

ವಾಷಿಂಗ್ಟನ್‌: ಅಮೆರಿಕದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಭಾರತೀಯ ಮೂಲದ ಅಪ್ಪ ಮಗಳು ಬಲಿಯಾಗಿದ್ದಾರೆ.

ಹತ್ಯೆಯಾದ ತಂದೆ ಮಗಳನ್ನು ಪ್ರದೀಪ್ ಪಟೇಲ್ (56), ಊರ್ಮಿ (24) ಎಂದು ಗುರುತಿಸಲಾಗಿದೆ. ಶೂಟರ್‌ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಬಂಧಿತ ಆರೋಪಿ.

24 ವರ್ಷದ ಭಾರತೀಯ ಮಹಿಳೆ ಮತ್ತು ಆಕೆಯ 56 ವರ್ಷದ ತಂದೆಯನ್ನು ಅಮೆರಿಕದ ವರ್ಜೀನಿಯಾದಲ್ಲಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಯೊಂದರಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕೋಮಾಕ್ ಕೌಂಟಿಯಲ್ಲಿ ಅಂಗಡಿ ತೆರೆದ ಕೆಲವೇ ಸಮಯದ ಬಳಿಕ ಗುಂಡಿನ ದಾಳಿ ನಡೆದಿದೆ.

ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಮದ್ಯ ಖರೀದಿಸಲು ಅಪ್ಪ-ಮಗಳಿದ್ದ ಅಂಗಡಿಗೆ ಬಂದಿದ್ದರು. ಈ ವೇಳೆ ರಾತ್ರಿ ಅಂಗಡಿ ಏಕೆ ಮುಚ್ಚಲಾಗುತ್ತು ಎಂದು ಕೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ಜೋರಾಗಿದ್ದು, ಆರೋಪಿ ಗುಂಡು ಹಾರಿಸಿದ್ದಾನೆ. ತಂದೆ ಪ್ರದೀಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗಳು ಊರ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರದೀಪ್‌ ಪಟೇಲ್‌, ಪತ್ನಿ ಹಂಸಾಬೆನ್‌, ಮಗಳು ಊರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರು. 6 ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದರು. ಪ್ರದೀಪ್‌ ತನ್ನ ಸಂಬಂಧಿ ಪರೇಶ್‌ ಪಟೇಲ್‌ ಮಾಲೀಕತ್ವದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!