- Advertisement -
- Advertisement -


ಬಳ್ಳಾರಿ: ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯ ಕಣೇಕಲ್ ರಸ್ತೆಯ ರಾಣಿತೋಟ ಏರಿಯಾದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸಿರುಗುಪ್ಪ ತಾಲೂಕಿನ ಕೊಂಚಗೇರಿ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ.
ರಾಣಿತೋಟದ ಜುಮ್ಮಾ ಮಸೀದಿಯ ಬಳಿ ದುಷ್ಕರ್ಮಿಗಳು ವೆಂಕಟೇಶ್ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮೃತ ವೆಂಕಟೇಶ್ ಹಾಗೂ ನೀಲಮ್ಮ ಮದುವೆ ಆಗಿ 10 ವರ್ಷಗಳಾಗಿತ್ತು. ಮದುವೆ ಆದ ಮೇಲೆ ಮನೆ ಅಳಿಯನಾಗಿ ಬಂದಿದ್ದ ವೆಂಕಟೇಶ್ಗೆ ಪತ್ನಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂದು ವೆಂಕಟೇಶ್ ತಾಯಿ ದೊಡ್ಡ ಬಸಮ್ಮ ಆರೋಪಿಸಿದ್ದಾರೆ. ಘಟನೆ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
- Advertisement -