Friday, June 5, 2026
spot_imgspot_img
spot_imgspot_img

ಕಾಪು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು..!

- Advertisement -
- Advertisement -

ಕಾಪು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಾಪುವಿನಲ್ಲಿ ನಡೆದಿದೆ.

ಕಾಪುವಿನ ಜಮೀಲಾಬಿ ಮನೆಯ ಬೀಗ ಹಾಕಿ, ಮಗನ ಮನೆಗೆ ಹೋಗಿದ್ದು, ಈ ವೇಳೆ ಮನೆಯ ಬಾಗಿಲು ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಂನ ಕಪಾಟಿನಲ್ಲಿದ್ದ ಮುತ್ತಿನ ಹಾರ, ಬಳೆ, 4 ಉಂಗುರುಗಳು, ಕಿವಿಯೋಲೆ, ಒಡೆಗೆ ಹಾಕುವ ಹೂ, 3 ಜೊತೆ ಕಿವಿಯ ಟಿಕ್ಕಿ ಚಿಕ್ಕ ಚೈನ್, ಕಿವಿಯ ರಿಂಗ್‌ ಸೇರಿ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಮೌಲ್ಯ 3,84,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!