Saturday, June 27, 2026
spot_imgspot_img
spot_imgspot_img

ಕರಿಮಣಿ ಸರ ಅಪಹರಿಸಿ; ವ್ಯಕ್ತಿ ಪರಾರಿ!!

- Advertisement -
- Advertisement -

ಉಡುಪಿ: ಉಡುಪಿ ಬೋರ್ಡ್ ಹೈಸ್ಕೂಲ್ ಶಾಲೆಯ ಹಿಂಬದಿ ರಸ್ತೆಯಲ್ಲಿ ನ.22ರಂದು ಮಧ್ಯಾಹ್ನ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಯೊಬ್ಬರ ಕರಿಮಣಿ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ಬ್ರಹ್ಮಗಿರಿಯ ವಾರಿಜ(57) ಎಂಬವರು ತನ್ನ ತಂಗಿ ಜೊತೆ ಮೀನಿನ ಬುಟ್ಟಿ ಯನ್ನು ಹೊತ್ತುಕೊಂಡು ಹೋಗುತ್ತಿದ್ದರು. ಆಗ ರಸ್ತೆಯ ಬದಿಯಲ್ಲಿ ಕಪ್ಪು ಬಣ್ಣದ ಬೈಕಿನಲ್ಲಿ ಕುಳಿತುಕೊಂಡಿದ್ದ, ಕೆಂಪು, ತಿಳಿ ಗುಲಾಬಿ ಇತರೆ ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ 30 ವರ್ಷ ಪ್ರಾಯದ ಯುವಕ, ವಾರಿಜ ಅವರ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ 4 ಪವನ್ ತೂಕದ 1,20,000ರೂ. ವೌಲ್ಯದ ಚಿನ್ನದ ಕರಿಮಣಿ ಸರವನ್ನು ಬಲಾತ್ಕಾರ ವಾಗಿ ಕಿತ್ತುಕೊಂಡು ಪರಾರಿಯಾದನು ಎಂದು ದೂರಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!