Thursday, June 25, 2026
spot_imgspot_img
spot_imgspot_img

ಸೂರಿಕುಮೇರು ಎಸ್‌ವೈಎಸ್ ನಿಂದ ಜಲಾಲಿಯ್ಯಾ ರಾತೀಬ್

- Advertisement -
- Advertisement -

ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ವತಿಯಿಂದ ಜಲಾಲಿಯ್ಯಾ ರಾತೀಬ್ ಆಧ್ಯಾತ್ಮಿಕ ಮಜ್ಲಿಸ್ ಸೋಮವಾರ ಕೆಸಿಎಫ್ ನಾಯಕ ಆಸಿಫ್ ಸೂರಿಕುಮೇರು ರವರ ನಿವಾಸದಲ್ಲಿ ನಡೆಯಿತು.

ಉಸ್ತಾದ್ ಕಡಬ ಅಶ್ರಫ್ ಸಅದಿಯವರು ನೇತೃತ್ವ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು್. ಅಶ್ರಫ್ ಸಖಾಫಿ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಲೀಲ್ ಸಖಾಫಿ ಬರಿಮಾರ್,ಇಸಾಕ್ ಮುಸ್ಲಿಯಾರ್ ಮಾಣಿ,ಜಮಾಲ್ ಮುಸ್ಲಿಯಾರ್ ಮಾಣಿ,ಇಬ್ರಾಹಿಂ ಮುಸ್ಲಿಯಾರ್ ಹಳೀರ, ಮುಬಶ್ಶಿರ್ ಮುಸ್ಲಿಯಾರ್ ಸೂರಿಕುಮೇರು, ಹನೀಫ್ ಸಂಕ,ಹಸೈನ್ ಸಂಕ,ಕರೀಂ ನೆಲ್ಲಿ,ಹಂಝ ಕಾಯರಡ್ಕ,ಫತ್ತಾಹ್ ಮಾಣಿ,ಯೂಸುಫ್ ಹಾಜಿ,ಉಮರುಲ್ ಫಾರೂಕ್ ಬದ್ರಿಯಾ ಗ್ರೌಂಡ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಬ್ರಾಂಚ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿದರು ಮತ್ತು ಧನ್ಯವಾದ ಸಮರ್ಪಿಸಿದರು.

- Advertisement -

Related news

error: Content is protected !!