ನನ್ನ ತಂಟೆಗೆ ಬರಬೇಡಿ. ಎಲ್ಲದಕ್ಕೂ ಒಂದು ಇತಿಮಿತಿ ಇದೆ – ಶಾಸಕ ಅಶೋಕ್ ರೈ






ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕರವರ ಗಡಿಪಾರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಪಾತ್ರ ಇದೆ ಎಂದು ಆರೋಪ ಮಾಡಿದ್ದು ಇದಕ್ಕೆ ಖಡಕ್ ಉತ್ತರ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಹಕೀಮ್ ಕೂರ್ನಡ್ಕರವರು ನನ್ನ ಮುಂದೆ ಬಂದರೆ ನನಗೆ ಅವರ ಪರಿಚಯ ಇಲ್ಲ. ನಾನು ಯಾರಿಗೂ ಅನ್ಯಾಯ ಮಾಡುದಿಲ್ಲ, ಅನ್ಯಾಯ ಮಾಡುವವನ್ನು ಅಲ್ಲ. ಈ ಹಿಂದೆ ಬಿಜೆಪಿ ಸರಕಾರ ಇತ್ತು ಎಷ್ಟೋ ಜನರಿಗೆ ಗೂಂಡಾ ಕಾಯ್ದೆಯಲ್ಲಿ ರೌಡಿಶೀಟರ್ ಆಗಿ ಅವರ ಹೆಸರು ನಡೆಯಿತು. ನಾನು ಶಾಸಕನಾಗಿ ಬಂದ ಮೇಲೆ ನಾನು ಯಾವುದೇ ಜಾಹಿರಾತು ಕೊಡಲಿಲ್ಲ. ಅದರಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಇದ್ದಾರೆ. ನಾವು ಅದನ್ನು ಸರಕಾರಕ್ಕೆ ನೀಡಿ 84 ಜನರನ್ನು ಗೂಂಡಾ ಲಿಸ್ಟ್‌ನಿಂದ ತೆಗೆಯುವಂತ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.
ಹಕೀಂ ಕೂರ್ನಡ್ಕರವರು ನನ್ನ ಮೇಲೆ ಈ ಆರೋಪವನ್ನು ಹಾಕುತ್ತಿದ್ದಾರೆ. ಅಶೋಕ್ ಕುಮಾರ್ ರೈಯವರು ಇದನ್ನು ಮಾಡಿದ್ದಾರೆ ಎಂದು. ಅವರು ಮುಸ್ಲಿಂ ಧರ್ಮವನ್ನು ನಂಬುವವರು ಅವರು ಕುರಾನ್ ಹಿಡಿದುಕೊಂಡು ಬರಲಿ, ಕುರಾನ್ ಹಿಡಿದುಕೊಂಡು ಹೇಳಲಿ ಅಶೋಕ್ ರೈಯವರು ಇದಕ್ಕೆ ಹಸ್ತಕ್ಷೇಪ ಮಾಡಿದ್ದಾರೆ. ನಾನು ಪೊಲೀಸ್ ಇಲಾಖೆಗೆ ಫೋನ್ ಮಾಡಿದ್ರೆ ಅವರು ನಂಬುವ ಕುರಾನ್ ಇದೆ ಅಲ್ಲ ಅದು ಅವರಿಗೆ ಉತ್ತರ ಕೋಡುತ್ತದೆ. ನಾನು ಅಂತಹ ಕೀಳು ಮಟ್ಟದ ಕೆಲಸವನ್ನು ಮಾಡುವವನಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ಯಾರಲ್ಲೂ ಒಂದು ರೂಪಾಯಿಗೂ ಕೈ ಚಾಚಿಲ್ಲ. ನನಗೆ ಹಕೀಮ್ ಕೂರ್ನಡ್ಕರ ಮೇಲೆ ಯಾವುದೇ ವೈಯಕ್ತಿಕ ಕೋಪ ಇಲ್ಲ ಎಂದರು.
ವೈಕ್ತಿಕವಾಗಿ ನಾನು ಯಾರನ್ನೂ ದ್ವೇಶ ಮಾಡಿಲ್ಲ. ಅವರಿಗೆ ನೋವಾಗಿರಬಹುದು, ಗ್ರೊಪ್‌ಲ್ಲಿ ಹಕೀಂ ಕೂರ್ನಡ್ಕ ಬಗ್ಗೆ ಬರೆದಿದ್ರೆ ನಾನು ಅದಕ್ಕೆ ಜವಬ್ದಾರನಲ್ಲ. ನಮ್ಮ ಬಗ್ಗೆ ವಿರೋಧವಾಗಿ ಮಾತನಾಡಿದರೆ ಅವರ ವಿರೋಧವಾಗಿ ನಾನು ಯಾವುದೇ ಕೆಲಸವನ್ನು ಮಾಡುವಿದಿಲ್ಲ. ನಾನು ಗನ್ ಹಿಡಿದಿದ್ದೇನೆ ಅವರನ್ನು ಗಡಿಪಾರು ಮಾಡಬೇಕು ಎಂಬ ವಿಚಾರವನ್ನು ಕೇಳಿದ್ದೇನೆ. ನನ್ನ ಆತ್ಮ ರಕ್ಷಣೆಗೆ ನನಲ್ಲಿ ಗನ್ ಇದೆ. ನನಗೆ ಪೆನ್ನು ಹಿಡಿಯಲಿಕ್ಕೂ ಗೊತ್ತಿದೆ, ಗನ್ ಹಿಡಿಯಲಿಕ್ಕೂ ಗೊತ್ತಿದೆ ಯಾರಿಗೆ ಯಾವ ರೀತಿ ಉತ್ತರ ಕೊಡಬೇಕು ಅಂತ ಒಳ್ಳೆ ಗೊತ್ತಿದೆ ಗೊತ್ತಿಲ್ಲದೇ ಬಿಟ್ಟಿರುವುದಲ್ಲ.
ನಾನು ಯಾರ ಗಡಿಪಾರಿನಲ್ಲೂ ಹಸ್ತಕ್ಷೇಪ ಮಾಡಿಲ್ಲ. ಐದು ವರ್ಷ ಜನ ನನಗೆ ಆರ್ಶಿವಾದ ಮಾಡಿದ್ದಾರೆ ಅಭಿವೃದ್ಧಿ ಮಾಡಿ ತೋರಿಸ್ತೆನೆ. ಇಂತಹ ಚಿಕ್ಕ ಪುಟ್ಟ ವಿಚಾರಗಳಿಗೆ ನಾನು ತಲೆ ಕೆಡಿಸುದಿಲ್ಲ. ನನ್ನ ತಂಟೆಗೆ ನೀವು ಯಾರೂ ಬರಬೇಡಿ. ನಾನು ನಿಮ್ಮ ತಂಟೆಗೆ ಬರುದಿಲ್ಲ. ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದರು.








