Saturday, September 19, 2026
spot_imgspot_img
spot_imgspot_img

ಕೆಂಪು ಕಲ್ಲು ಸಾಗಾಟ ಮತ್ತು ಮರಳು ಸಾಗಾಟಕ್ಕೆ ಕಠಿಣ ಕಾನೂನು ಯಾಕೆ…? – ಧನ್ಯ ಕುಮಾರ್ ಬೆಳಂದೂರುರವರಿಂದ ಬಹಿರಂಗ ಪತ್ರ

- Advertisement -
- Advertisement -

ಕೆಂಪು ಕಲ್ಲು ಸಾಗಾಟ ಮತ್ತು ಮರಳು ಸಾಗಾಟಕ್ಕೆ ಹೇರಿದ ಕಠಿಣ ಕಾನೂನಿಗೆ ಸಂಬಂಧಪಟ್ಟಂತೆ ಧನ್ಯಕುಮಾರ್ ಬೆಳಂದೂರು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.

ಸರ್ಕಾರದ ಅಧಿಕಾರಿಗಳಿಂದ ಹೊಸ ಕಾನೂನು ರೂಲ್ಸ್ ಗಳಿಂದಾಗಿ ಕೆಂಪು ಕಲ್ಲು ಪಾಯ ಮತ್ತು ಸಾಗಾಟದಲ್ಲಿ ಹಾಗೂ ಸರ್ಕಾರಿ ಕಟ್ಟಡ ಅಥವಾ ಯಾವುದೇ ಮನೆ ಕಟ್ಟಿ ಗೃಹ ಪ್ರವೇಶ, ಸರ್ಕಾರಿ ಕಟ್ಟಡ ಉದ್ಘಾಟನೆ ಆಗವವರೆಗೆ ದುಡಿಯುವ ಅದೆಷ್ಟೋ ಕಾರ್ಮಿಕರ ಕಣ್ಣು ನೀರಿನ ಶಾಪಕ್ಕೆ ಸರ್ಕಾರ- ಅಧಿಕಾರಿಗಳು ಜನಪ್ರತಿನಿಧಿಗಳು ಗುರಿಯಾಗದಿರಿ ಎಚ್ಚರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಕೆಂಪು ಕಲ್ಲು ಬಗ್ಗೆ ಯಾಕೆ ದ್ವನಿ ಎತ್ತುತ್ತಿಲ್ಲ….?

ಕೆಂಪು ಕಲ್ಲು ಮತ್ತು ಹೊಯಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರತಿಯೊಬ್ಬರೀಗೂ ಅತೀ ಮುಖ್ಯವಾಗಿ ಬೇಕಾಗಿರುವಂತಹುದು ಆದರೆ ಇದರ ಬಗ್ಗೆ ಯಾವ ಪಕ್ಷದ ಪ್ರತಿನಿಧಿಗಳು ಯಾಕೆ ದ್ವನಿ ಎತ್ತುತ್ತಿಲ್ಲ…..?

ಕಾರಣವಾದರು ಏನಿರಬಹುದು…?ಕೆಂಪು ಕಲ್ಲು ಅಂದ್ರೆ ಜಂಬು ಇಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತೀ ರಾಜಕಾರಣಿಗಳ ಮನೆಗೆ ಸರ್ಕಾರಿ ಕಟ್ಟಡಗಳಿಗೆ, ದೇವಸ್ಥಾನ, ಚರ್ಚ್, ಮಸೀದಿಗೆ ಹಾಗೂ ಸಾರ್ವಜನಿಕ ಬಡ ಕುಟುಂಬದವರಿಗೂ ಒಂದು ಮನೆ ನಿರ್ಮಿಸಲು ಬೇಕಾಗಿರುವ ಅಗತ್ಯ ವಸ್ತು ಆದರೆ ಇದಕ್ಕೆ ಯಾಕೆ ಇಷ್ಟು ಕಠಿಣ ಕಾನೂನು ರೂಲ್ಸ್…..?

ಕೆಂಪು ಕಲ್ಲಿನ ಹಿಂದೆ ಅದೆಷ್ಟು ಬಡ ಕುಟುಂಬದ ಪರಿಶ್ರಮ ಇದೆಯೇಂದು ರಾಜಕೀಯ ಜನಪ್ರತಿನಿಧಿಗಳು ಅಧಿಕಾರಿಗಳು ಆಲೋಚನೆ ಮಾಡಿದ್ದಿರ….ಇಲ್ಲ ಯಾಕೆ….?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಬ್ಬರೀಗೂ ಮನೆ ಕಟ್ಟಲು ಕೆಂಪು ಕಲ್ಲು ಬೇಕು ಆದರೆ ಕೆಂಪು ಕೋರೆ ನಡೆಸುವವರ ವಿರುದ್ಧ ಸರ್ಕಾರ ನಡೆಸುತ್ತಿರುವ ದಿನಕ್ಕೋಂದು ಕಾನೂನು, ದೌರ್ಜನ್ಯ ಇದರ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರು ಸರ್ಕಾರಕ್ಕೆ ಅಧಿಕಾರಿಗಳಲ್ಲಿ ಯಾವಾತ್ತಾದರು ಪ್ರಶ್ನೆ ಮಾಡಿದ್ದೀರ ಇಲ್ಲ ಯಾಕೆ….?

ಇವತ್ತು ಕೆಂಪು ಕಲ್ಲು ಸಾಗಾಟ ಬಂದ್ ಆಗಿದೆ ಇದರಿಂದಾಗಿ ಅದೆಷ್ಟು ಕುಟುಂಬಗಳು ಬೀದಿಪಾಲಾಗಿದ್ದಾರೆ ಇದರ ಬಗ್ಗೆ ಕಿಂಚಿತ್ತು ಜನಪ್ರತಿನಿಧಿಗಳು ಸಾರ್ವಜನಿಕರು ಚಿಂತೆ ಮಾಡಿದ್ದೀರ ಇಲ್ಲ ಯಾಕೆ..?ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀಯೊಬ್ಬರೀಗೂ ಕೆಂಪು ಕಲ್ಲು ಹೊಯಿಗೆ ಬೇಕೆ ಬೇಕು ಆದರೆ ಸರ್ಕಾರ ನೀಡುತ್ತಿರುವ ಕಿರುಕುಳ ನಿಮಗರಿಯದಾಯಿತು ಅದಕ್ಕಾಗಿಯೇ ನಾವುಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಗೆ ಕರೆ ನೀಡಿರುವುದು….!ಕೆಂಪು ಕಲ್ಲು ಪಾಯ ನಡೆಸುವವರು ಹಾಗೂ ಅದೆಷ್ಟೋ ಜನ ಸ್ವಾ ಉದ್ಯೋಗಕ್ಕಾಗಿ ಕೆಂಪು ಕಲ್ಲು ಸಾಗಾಟಕ್ಕೆ ಬ್ಯಾಂಕ್ ಗಳಿಂದ ಸಾಲ ಮಾಡಿ ಲಾರಿ ಖರೀದಿ ಮಾಡುತ್ತಾರೆ

ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬಂತು ಎಂದಾಗುವಾಗಲೇ ಸರ್ಕಾರದಿಂದ ಬರುವ ಹೊಸ ಹೊಸ ಕಾನೂನಿಂದಾಗಿ ಕೆಂಪು ಕಲ್ಲು ಲೋಡು ರೋಡಿಗೆ ಇಳಿಯುವಾಗಲೆ ಫೈನ್ ಎಂಬ ಬರೆಯನ್ನು ಎಳೆದು ಆತ ಲಾರಿಯನ್ನೆ ನಡೆಸದ ರೀತಿ ರೂಲ್ಸ್ ಹಾಕಿ ಬಿಡುತ್ತಾರೆ.. ಜೊತೆಗೆ ಕೆಂಪು ಕಲ್ಲಿನ ಕೋರೆಯವರೀಗೂ ಇದೇ ರೂಲ್ಸ್…!ಸರ್ಕಾರದ ಕಾನೂನು ರೂಲ್ಸ್ ನಿಂದಾಗಿ ಒಂದು ಕೆಂಪು ಕಲ್ಲು ಪಾಯ ಮಾಡ ಬೇಕಾದರೆ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸಿ ಕೆಂಪು ಕಲ್ಲು ಪಾಯ ಪ್ರಾರಂಭ ಮಾಡುವಾಗ ನಮ್ಮ ಅರ್ದ ಜೀವ ಹೋಗಿರುತ್ತದೆ, ದಿನ ಹೋದ ಹಾಗೆ ಸರ್ಕಾರದ ರೂಲ್ಸ್ ಜಾಸ್ತಿ ಆಗಿ ಒರ್ಷ ಒರ್ಷ ರಾಯೇಲ್ಟಿ ದುಪ್ಪಟ್ಟು ಮಾಡಿ ನಮ್ಮಿಂದ ಸಾಧ್ಯವಿಲ್ಲ ಎಂದಾದಾಗ ಕೊನೇಗೆ ಕೆಂಪು ಕಲ್ಲು ಪಾಯವನ್ನೆ ಬಂದ್ ಮಾಡುವ ಅನಿವಾರ್ಯತೆ ಬಂದಾಗಿರುತ್ತದೆ….ಈಗ ಆಗಿರುವುದೇ ಇದುವೇ ಕೆಂಪು ಕಲ್ಲು ಕೋರೆ ಬಂದ್…..!ಕೆಂಪು ಕಲ್ಲು ಸಾಗಾಟ ಆಗದಿದ್ದರೆ ಕೆಂಪು ಕಲ್ಲು ಪಾಯದಲ್ಲಿ ಬೇರೆ ರಾಜ್ಯಗಳಲ್ಲಿಂದ ದುಡಿಮೆಗಾಗಿ ಬಂದ ಅದೆಷ್ಟೋ ಕಾರ್ಮಿಕರು, ಕೆಂಪು ಕಲ್ಲು ಲಾರಿಗೆ ಲೋಡು ಮಾಡುವವರಿಂದ ಹಿಡಿದು ಮನೆಕಟ್ಟುವ ಮೇಸ್ತ್ರಿಗಳು ಹೆಲ್ಪರುಗಳು ಸೆಂಟ್ರಿಂಗ್ ಪೈಂಟಿಂಗ್ ನಿಜ ಹೇಳ ಬೇಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25000 ರಿಂದ 30000 ಸಾವಿರ ಕಾರ್ಮಿಕರೀಗೆ ಕೆಲಸವಿಲ್ಲದೆ ಬೀದಿಪಾಲು ಆಗಿದ್ದಾರೆ ಇದಕ್ಕೆ ಕಾರಣ ಕರ್ತರು ಯಾರು….. ಸರ್ಕಾರವ ಅಥವ ಅಧಿಕಾರಿಗಳ…..ಅಥವ ಸರಕಾರ ನಡೆಸುತ್ತಿರುವ ಜನಪ್ರತಿನಿಧಿಗಳ…..?ಇನ್ನಾದರೂ ದಯವಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಸಾರ್ವಜನಿಕರು ಎಚ್ಚೆತ್ತು ಕೊಂಡು ಕೆಂಪು ಕಲ್ಲು ಹಾಗೂ ಹೊಯಿಗೆ ಗಳಿಗೆ ನೀಡುವ ಪರವಾನಿಗೆಯ ರೂಲ್ಸ್ ಕಾನೂನು ಸಡಿಲಗೊಳಿಸಿ ಸಾರ್ವಜನಿಕರೀಗೆ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ನೀಡ ಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಗಳಲ್ಲಿ ಬೇಡಿಕೊಳ್ಳುತ್ತಿದೇವೆ, ಎಂಬುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ

- Advertisement -

Related news

error: Content is protected !!