

ಪುತ್ತೂರು: ದೇಶ ವಿದೇಶಗಳಲ್ಲಿ ವ್ಯಾಪಕ ಉದ್ಯೋಗ ಅವಕಾಶಗಳಿರುವ ವಿಷಯಗಳಾದ ಏರ್ ಕಂಡಿಷನಿಂಗ್ ಎಲೆಕ್ಟ್ರಿಕಲ್ ಆಟೋಮೊಬೈಲ್ ವಿಭಾಗಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕೌಶಲ್ಯ ವನ್ನು ಹೆಚ್ಚಿಸುವ ತರಬೇತಿಯನ್ನು ನೀಡುವ ಉದ್ದೇಶದಿಂದ ಪುತ್ತೂರಿನ ಬೋಳುವಾರು ನಲ್ಲಿರುವ ಹಿರಣ್ಯ ಸಂಕೀರ್ಣದಲ್ಲಿ ಕಳೆದ 15 ವರ್ಷಗಳಿಂದ ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.


ಕಳೆದ ಶೈಕ್ಷಣಿಕ ಅವಧಿಗಳಲ್ಲಿ ತರಬೇತಿ ಪಡೆದ ಸುಮಾರು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿ ಗಳಿಗೆ ದೇಶದ ಮಹಾನಗರಗಳಾದ ಬೆಂಗಳೂರು ಮುಂಬೈ ಹೈದರಾಬಾದ್ ಪುಣೆಗಳಲ್ಲಿ ಉದ್ಯೋಗವನ್ನು ದೊರಕಿಸಿ ಕೊಟ್ಟ ಸಾಧನೆ ಜ್ಞಾನ ಜ್ಯೋತಿ ಸಂಸ್ಥೆಯದ್ದಾಗಿದೆ. ಇಲ್ಲಿ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಪ್ರಸ್ತುತ ವಿದೇಶದಲ್ಲಿ ಉದ್ಯೋಗವನ್ನು ಮಾಡುತ್ತಿರುವುದಲ್ಲದೆ ಕೆಲವು ವಿದ್ಯಾರ್ಥಿಗಳು ಯಶಸ್ವಿಯಾಗಿ ಸ್ವ ಉದ್ಯೋಗವನ್ನು ನಡೆಸುತ್ತಿದ್ದಾರೆ.
ಜ್ಞಾನಜೋತಿ ತಾಂತ್ರಿಕ ವಿದ್ಯಾ ಕೇಂದ್ರವು ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿರೊಂದಿಗೆ ಸಂಯೋಜನೆ ಹೊಂದಿದ್ದು 2025-26 ನೇ ಶೈಕ್ಷಣಿಕ ವರ್ಷದ ತರಬೇತಿಗಳಿಗೆ ದಾಖಲಾತಿಗಳು ಆರಂಭಗೊಂಡಿದೆ. ತರಬೇತಿ ಪಡೆಯಲು ಆಸಕ್ತ ಅಭ್ಯರ್ಥಿಗಳು ಜ್ಞಾನಜ್ಯೋತಿ ಶಿಕ್ಷಣ ಕೇಂದ್ರ ಹಿರಣ್ಯ ಸಂಕೀರ್ಣ ಬೋಳುವಾರು ಪುತ್ತೂರು ಇಲ್ಲಿನ ಕಚೇರಿಯನ್ನು ಅಥವಾ 9731540465 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

