Thursday, July 3, 2025
spot_imgspot_img
spot_imgspot_img

ಪುತ್ತೂರು: ಅನುಮತಿ ಪಡೆಯದೇ ಎಸ್‌‌ಡಿಪಿಐ ಪ್ರತಿಭಟನೆ; F.I.R ದಾಖಲು..!

- Advertisement -
- Advertisement -

ಪುತ್ತೂರು: SDPI ಪುತ್ತೂರು ವಿಧಾನಸಭಾ ಕ್ಷೇತ್ರ ಪುತ್ತೂರು ವತಿಯಿಂದ ಕಿಲ್ಲೆ ಮೈದಾನದ ಬಳಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನಲೆ ಪ್ರಕರಣ ದಾಖಲಾಗಿದೆ.

ದಿನಾಂಕ 2.07.2025 ರಂದು ಸಂಜೆ ಕಿಲ್ಲೆ ಮೈದಾನದ ಬಳಿ ಅಧ್ಯಕ್ಷ ಅಶ್ರಫ್ ಬಾವು ಎಂಬವರು ಹಾಗೂ ಇತರೆ ಸುಮಾರು 30 ಜನರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮ ಗುಂಪು ಸೇರಿ ಧ್ವನಿವರ್ಧಕವನ್ನು ಬಳಸಿ ಪ್ರತಿಭಟನೆ ನಡೆಸಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಆರೋಪಿತರುಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 53-2025 ಕಲಂ 189(ಸಿ), ಬಿ.ಎನ್.ಎಸ್ ಮತ್ತು ಕಲಂ 109 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.

- Advertisement -

Related news

error: Content is protected !!