- Advertisement -
- Advertisement -



ಕಾಸರಗೋಡು: ವರ್ಕಾಡಿಯಲ್ಲಿ ಮನೆಯೊಂದಕ್ಕೆ ಇಂದು ಮುಂಜಾನೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಕಿಟಿಕಿ ಗಾಜುಗಳು ಒಡೆದಿವೆ.
ವರ್ಕಾಡಿ ಜಂಕ್ಷನ್ ಸಮೀಪದ ನಲ್ಲೆಂಗಿಪದವಿನ ಬಿ. ಎಂ ಹರೀಶ್ ರವರ ಮನೆಯ ಮೇಲೆ ಮುಂಜಾನೆ ಎರಡೂವರೆ ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಶಬ್ದ ಕೇಳಿ ಹರೀಶ್ ಹಾಗೂ ಕುಟುಂಬ ಗಮನಿಸಿದಾಗ ದುಷ್ಕರ್ಮಿಗಳು ಕಾರು ಮತ್ತು ಬೈಕ್‌ನಲ್ಲಿ ಪರಾರಿಯಾಗಿರುವುದಾಗಿ ಹರೀಶ್ ಮಂಜೇಶ್ವರ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಫಾರೆನ್ಸಿಕ್ ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ. ಈ ಪ್ರದೇಶದಲ್ಲಿ ಹಂದಿ ಗಳ ಕಾಟ ಹೆಚ್ಚಾಗಿದ್ದು, ಬೇಟೆಗಾರರು ಹಾರಿಸಿದ ಗುಂಡು ಗುರಿತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
- Advertisement -