- Advertisement -
- Advertisement -



ಬೆಳಗಾವಿ: ಸಾರಿಗೆ ಬಸ್ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಬಳಿ ನಡೆದಿದೆ.
ಮೃತಪಟ್ಟವರನ್ನು ಕಲಬುರಗಿ ಜಿಲ್ಲೆಯ ಅಮ್ಮಲಪುರದ ಗಿರೀಶ ಅಶೋಕ ಬಳ್ಳೂರಗಿ (28), ರಾಹುಲ ಮ್ಯಾಲೇಶಿ (25), ಸಂಗಮೇಶ ಗಿರೀಶ ಅಮರಗೊಂಡ (26) ಎಂದು ಗುರುತಿಸಲಾಗಿದೆ.
ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಹೋಗಿ ಮರಳಿ ಊರಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಿನಾಯಕ ಪ್ರಸಾದ ತೀವಾರಿ (30)ಎಂಬುವರು ಗಂಭೀರ ಗಾಯಗೊಂಡಿದ್ದು, ಅವರನ್ನು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -