ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಸೀಮ್ಲಾಜೆ, ಕೋಶಾಧಿಕಾರಿಯಾಗಿ ಸಂತೋಷ ಶೆಟ್ಟಿ ಪೆಲತಡ್ಕ



ವೀರಕಂಬ: ವೀರಕಂಬ ಗ್ರಾಮದ ಬಂಟರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯು ಶ್ರೀ ನೀಕೇತನದಲ್ಲಿ ನಡೆಯಿತು. ಶ್ರೀಮತಿ ಕುಸುಮಾ ಶೆಟ್ಟಿ ಮಜಿಯವರು ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಿದರು. ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಸೀಮ್ಲಾಜೆ, ಕೋಶಾಧಿಕಾರಿಯಾಗಿ ಸಂತೋಷ ಶೆಟ್ಟಿ ಪೆಲತಡ್ಕ,, ಜಗನ್ನಾಥ್ ಶೆಟ್ಟಿ ಕಂಪದಬೈಲು, ನಾಗರಾಜ ಶೆಟ್ಟಿ ಅರೆಬೆಟ್ಟು, ಕೇಶವ ಶೆಟ್ಟಿ ನಡುವಲಚ್ಚಿಲು ನಾರಾಯಣ ರೈ ಕಲ್ಮಲೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಮಹಿಳಾ ಸಮಿತಿ ಗೌರವಾಧ್ಯಕ್ಷರಾಗಿ ಬೇಬಿ ಜೆ ಆಳ್ವ ಕಂಪದಬೈಲ್, ಅಧ್ಯಕ್ಷರಾಗಿ ಅನಿತಾ ಶೆಟ್ಟಿ ಸೀನಾಜೆ, ಕಾರ್ಯದರ್ಶಿಯಾಗಿ ನಮಿತಾ ಸಿಮ್ಲಾಜೆ ಪಾತ್ರ ಜಾಲು, ಕೋಶಾಧಿಕಾರಿಯಾಗಿ ರಾಜೇಶ್ವರಿ ಕಂಬಳದಡ್ಡ ಆಯ್ಕೆ ಮಾಡಲಾಯಿತು. ಯುವ ಅಧ್ಯಕ್ಷರಾಗಿ ಯಶವಂತ್ ಶೆಟ್ಟಿ ಕಂಪದಬೈಲು, ಕಾರ್ಯದರ್ಶಿ ಆಕಾಶ್ ಶೆಟ್ಟಿ ಅರೆಬೆಟ್ಟುರನ್ನು ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಎಲ್ಲರ ಒಮ್ಮತದ ಮೇರೆಗೆ ಈ ವರ್ಷ ವೀರಕಂಬ ಗ್ರಾಮದ ಸೀಮ್ಲಾಜೆಯಲ್ಲಿ ದಿನಾಂಕ 03-08-2025 ನೇ ಆದಿತ್ಯವಾರ ಕೇಸರ್ಡ್ ಒಂಜಿ ದಿನ ನಡೆಸುವುದನ್ನು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ಬಂಟ ಬಾಂಧವರು ತನು ಮನ ಧನ ಗಳಿಂದ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಭೆಯನ್ನು ಜಗದೀಶ್ ರೈ ನಡುವಳಚಿಲುರವರು ನಡೆಸಿಕೊಟ್ಟರು.