

ಕಬಕ ಗ್ರಾಮದ ವಿದ್ಯಾಪುರ 2ನೇ ಅಡ್ಡ ರಸ್ತೆಯಲ್ಲಿ ವಾಸಿಸುತ್ತಿದ್ದ ರುಕ್ಮ ಎಂಬವರು ಅಲ್ಪ ಕಾಲದ ಅಸೌಂಖ್ಯಾದಿಂದ ವಿಧಿವಶ ಆಗಿದ್ದರು. ಇವರ ಅಂತ್ಯ ಕ್ರಿಯೆಯನ್ನು ಕಬಕ ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಊರವರ ಸಹಕಾರದಿಂದ ನಡೆಸಲಾಗಿತ್ತು. ಇವರಿಗೆ ಒಂದು ಹೆಣ್ಣು ಮಗು ಸಂಪೂರ್ಣ ಅಂಗವಿಕಲೆ. ರುಕ್ಮ ಇವರ ಮುಂದಿನ ಸದ್ಗತಿ ಕಾರ್ಯಕ್ರಮ ಮಾಡಲು ಹಣವಿಲ್ಲದೆ ಅವರ ಬಡತನವನ್ನು ಹೇಳಿಕೊಂಡಾಗ ಸಹಾಯ ಸಂಜೀವಿನಿ ಸಂಸ್ಥೆಯಿಂದ ಇಂತೀಷ್ಟು ಸಹಾಯ ಮಾಡುವುದಾಗಿ ನಿರ್ಧರಿಸಿದ್ದು, ಸಂಗ್ರಹವಾದ ಸಹಾಯಧನವನ್ನು ರುಕ್ಮ ಇವರ ಧರ್ಮ ಪತ್ನಿ ಶಾಂತಿ ಇವರ ಕೈಯಲ್ಲಿ ರೂ. 10000.00 ನೀಡಲಾಯಿತು.
ಈ ಸಂದರ್ಭದಲ್ಲಿ ಸಂಜೀವಿನಿ ಸೇವಾ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಜಯರಾಮ್ ನೆಕ್ಕರೆ, ಶ್ರೀ ಮಹಾದೇವಿ ಉತ್ಸವ ಸಮಿತಿ ಅಧ್ಯಕ್ಷ ಧರ್ನಪ್ಪ ಸೀಗೆತ್ತಾಡಿ, ಹಿಂದೂ ಧರ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಅನುಗ್ರಹ, ಶ್ರೀ ಮಹಾದೇವಿ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಯತೀಶ್ ಪದ್ನಡ್ಕ, ಮಾಜಿ ಅಧ್ಯಕ್ಷ ಲೋಕೇಶ್ ಬಾಕಿಮಾರ್, ಪ್ರಸಾದ್ ಮೂವಳ, ಗಣೇಶ್ ಪದ್ನಡ್ಕ, ಹರ್ಷಿತ್ ಕಬಕ ಉಪಸ್ಥಿತರಿದ್ದರು.