


ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ಇದರ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಭಾಗಿತ್ವದೊಂದಿಗೆ ದಿ.ನಾರಾಯಣ ಶುಭಮಂಗಳ, ದಿ.ಉಮೇಶ್ ಗೌಡ ಅರ್ಕಲ್ತೋಟ, ದಿ.ಜನಾರ್ದನ ಕಂಪ ಇವರ ಸ್ಮರಣಾರ್ಥ ಸ್ವಯಂಪ್ರೇರಿತ ರಕ್ತದಾನ ಶಿಬಿರ ತಾ.20-07-2025 ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ರಕ್ತದಾನ ಶಿಬಿರದ ಉದ್ಘಾಟನೆಯನ್ನು ಡಾ.ರಾಮಚಂದ್ರ ಭಟ್ ಉರಿಮಜಲು ನೆರವೇರಿಸಿದರು.
ಈ ಸಂದರ್ಭ ಅಥಿತಿಗಳಾದ ಡಾ.ಸೀತಾರಾಮ ಭಟ್ ವೈದ್ಯಾಧಿಕಾರಿ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ವೀರಪ್ಪ ಮೂಲ್ಯ ಪುಣಚ, ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ ವಿಷ್ಣುಮೂರ್ತಿ ಯುವಕವೃಂದದ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ಯುವಕವೃಂದದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.ಯುವಕವೃಂದದ ಅಧ್ಯಕ್ಷರಾದ ಮನೋಜ್ ಕಂಪ ಸ್ವಾಗತಿಸಿದರು ಕಾರ್ಯದರ್ಶಿ ಗಿರೀಶ ಹಡೀಲು ವಂದಿಸಿದರು ಜಿತೇಶ್ ಕೊಲ್ಯ ಇವರು ಕಾರ್ಯಕ್ರಮ ನಿರೂಪಿಸಿದರು.ಶಿಬಿರದಲ್ಲಿ 42 ಮಂದಿ ರಕ್ತದಾನ ಮಾಡಿದರು.








