Thursday, June 25, 2026
spot_imgspot_img
spot_imgspot_img

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ಶಾಂತಿನಗರ, ದ.ಕ ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಯು 20-7-2025ನೇ ಆದಿತ್ಯವಾರ ವಿಟ್ಲ ಶಾಂತಿನಗರದ “ಅಕ್ಷಯ” ಸಮುದಾಯ ಭವನದಲ್ಲಿ ನಡೆಯಿತು.

ಪುತ್ತೂರಿನ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ರವಿ ಮುಂಗುಲಿಮನೆಯವರು ಗ್ಲಾಸ್‌ಗೆ ನಾಣ್ಯ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ನಡೆದ ಆಟಿಡೊಂಜಿ ದಿನ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ಲತಾಪ್ರಸಾದ್ ಕುದ್ಜಾಜೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ವಿಟ್ಲ ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಅಮಿತಾಕೃಷ್ಣ ಕುಡಿಪ್ಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಆಟಿಡೊಂಜಿ ದಿನ ಮಹತ್ವವನ್ನು ತಿಳಿಸಿದರು.

ಅಧ್ಯಕ್ಷ ಸಿ. ಕೆ. ಗೌಡ ಇರಂದೂರು, ಗೌರವಾಧ್ಯಕ್ಷ ಗಿರಿಯಪ್ಪ ಗೌಡ ಶಾಂತಿಲ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ವಿಟ್ಲ ಯುವ ವೇದಿಕೆ ಅಧ್ಯಕ್ಷ ದಿನೇಶ್‌ ಗೌಡ ಮಾಡ್ತೇಲ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಯ ವೀಜೇತರಿಗೆ ಬಹುಮಾನ ವಿತರಿಸಲಾಯಿತು. ಧರ್ಮವತಿ ಪಿ.ಬಿ ಗೌಡ ದೇವರಮನೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ವೇದಾವತಿ ವಂದಿಸಿದರು. ಶ್ರೀಮತಿ ಜಯಂತಿ ಮತ್ತು ಮಲ್ಲಿಕಾ ನಿರೂಪಿಸಿದರು. 29 ಬಗೆಯ ವಿವಿಧ ತಿಂಡಿ ತಿನಿಸುಗಳನ್ನು ಸಮಾಜ ಬಾಂಧವರು ಮನೆಯಲ್ಲಿಯೇ ಗುಂಪುಗಳಾಗಿ ವಿಂಗಡಿಸಿ ತಯಾರಿಸಿ ತಂದಿದ್ದರು.

- Advertisement -

Related news

error: Content is protected !!