Friday, July 24, 2026
spot_imgspot_img
spot_imgspot_img

ಮಣಿಪಾಲ: ಮೊಬೈಲ್ ಹ್ಯಾಕ್ ಮಾಡಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

- Advertisement -
- Advertisement -

ಮಣಿಪಾಲ: ವೈದ್ಯೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಕಸ್ತೂರ್ಬಾ ಕಾಲೇಜಿನಲ್ಲಿ ತೃತಿಯ ವರ್ಷದ ಎಂಡಿ ವಿದ್ಯಾಭ್ಯಾಸ ಮಾಡುತ್ತಿರುವ ಡಾ. ಎನ್.ಶ್ವೇತಾ ರೆಡ್ಡಿ ಎಂಬವರಿಗೆ ನ.18ರಂದು ಬ್ಯಾಂಕಿನ ಏಜೆಂಟ್ ಎಂದು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷಷನ್ ಸರ್ವಿಸ್ ಅವಧಿ ಮುಗಿದಿದೆ ಎಂದು ತಿಳಿಸಿದ್ದು, ಬಳಿಕ ಕರೆ ಮಾಡಿ ಗೂಗಲ್‌ನಲ್ಲಿ ಐ ಮೊಬೈಲ್ ಲೈಟ್ ಆ್ಯಪ್ ಎಂಬುದಾಗಿ ಸರ್ಚ್ ಮಾಡುವಂತೆ ತಿಳಿಸಿದ್ದರು.


ಅದರಂತೆ ಶ್ವೇತಾ ಸರ್ಚ್ ಮಾಡಿದಾಗ ಅವರ ಮೊಬೈಲ್ ಹ್ಯಾಕ್ ಆಗಿದ್ದು ನಂತರ ಆರೋಪಿಗಳು ಶ್ವೇತಾ ಅವರ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ನಿಂದ 3,70,944 ರೂ. ಗಳನ್ನು ಮೊಸದಿಂದ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!