





ವಿಟ್ಲ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕ ಇದರ 19 ನೇ ವರ್ಷದ “ಮಕ್ಕಳ ಸಾಹಿತ್ಯ ಸಮ್ಮೇಳನ” ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯ ವಿಠಲ ಶೆಟ್ಟಿ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಪ್ರೌಢ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಪ್ರೇಕ್ಷಾ ಉದ್ಘಾಟಿಸಿದರು. ಚಂದಳಿಕೆ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ 8ನೇ ತರಗತಿಯ ವಿದ್ಯಾರ್ಥಿನಿ ವನ್ಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಯಾಗಿ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೆಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿನಿ ಮಣಿ ಇವರು ಭಾಗವಹಿಸಿದ್ದರು. ಪುತ್ತೂರು ಕನ್ನಡ ಸಾಹಿತ್ಯ ಸಂಭ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ನಾರಾಯಣ ಕುಂಬ್ರ ಪುಸ್ತಕ ಬಿಡುಗಡೆ ಮಾಡಿದರು.

ಚಂದಳಿಕೆ ಶಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದಳಿಕೆ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಗಗನ್ ಎಸ್ ಎ ಸ್ವಾಗತಿಸಿದರು. ನಿಶಿತಾ ಮತ್ತು ಬಳಗ ಸ್ಪೂರ್ತಿ ಗೀತೆ ಹಾಡಿದರು. ಬಂಟ್ವಾಳ ಮಕ್ಕಳ ಕಲಾ ಲೋಕ ಇದರ ಅಧ್ಯಕ್ಷ ರಮೇಶ್ ಬಾಯಾರು ಪ್ರಸ್ತಾವಿಸಿದರು. ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಆಶಯ ನುಡಿ ಮಾತನಾಡಿದರು. ಚಂದಳಿಕೆ ಶಾಲೆ 7ನೇ ತರಗತಿಯ ಗ್ರೀಷ್ಮಾ ವಂದಿಸಿದರು. ವಿಟ್ಲ ಪಿ ಎಂ ಶ್ರೀ ಪ್ರೌಢಶಾಲೆ rmsa ಇಲ್ಲಿನ 8 ನೇ ತರಗತಿಯ ವೈನವಿ ಕೋಟ್ಯಾನ್ ನಿರೂಪಿಸಿದರು.








