Wednesday, July 29, 2026
spot_imgspot_img
spot_imgspot_img

ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ದುಂಡುಮೇಜಿನ ಸಭೆ.

- Advertisement -
- Advertisement -

ದಿನಾಂಕ: 14-12-2020ರ, ಸೋಮವಾರದಂದು, ಜಯಕರ್ನಾಟಕ ಜನಪರ ವೇದಿಕೆಯ ಮುಖ್ಯ ಸಲಹೆಗಾರರಾದ ಶ್ರೀಯುತ, ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀಯುತ, ಆರ್.ಚಂದ್ರಪ್ಪ ಮುಖಂಡತ್ವದಲ್ಲಿ, ರಾಜ್ಯ ಮಹಾ ಪ್ರಧಾನ ಸಂಚಾಲಕರಾದ ಶ್ರೀಯುತ, ಶೆ.ಭೊ.ರಾಧಾಕೃಷ್ಣ, ರಾಜ್ಯ ಸಂಚಾಲಕರಾದ ಶ್ರೀಯುತ, ಟಿ.ಪ್ರಕಾಶ್ ಗೌಡ, ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಜೆ.ಶ್ರೀನಿವಾಸ ರವರು ಮತ್ತು ತಂಡದವರಿಂದ,
ಆಯೋಜಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020, ಎನ್.ಇ.ಪಿ ವಿಚಾರವಾಗಿ ಕುರಿತು ಚರ್ಚೆ, ಸಂವಾದ ಮತ್ತು ಅಭಿಪ್ರಾಯ ಮಂಡನೆಯ “ದುಂಡುಮೇಜಿನ ಸಭೆಯನ್ನು” ಬೆಂಗಳೂರಿನ, ಶಿವಾನಂದ ವೃತ್ತದ, ಕುಮಾರ ಪಾರ್ಕ್ ಈಸ್ಟ್‌ ಬಳಿ ಇರುವ ಗಾಂಧಿಭವನದ, ಬಾಪು ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು: ಸಾಹಿತಿಗಳು ಹಾಗೂ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು:
ಶ್ರೀ ಸಾ.ರಾ. ಗೋವಿಂದು, ಅಧ್ಯಕ್ಷರು, ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಇವರು ನಡೆಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಇದರ ವಿಚಾರವಾಗಿ ಚರ್ಚೆಯಲ್ಲಿ ಭಾಗವಹಿಸಿದ ಗಣ್ಯವ್ಯಕ್ತಿಗಳು:

ಶ್ರೀ ಶ್ರೀಪಾದ ಭಟ್, ಸಾಹಿತಿಗಳು ಮತ್ತು ಲೇಖಕರು.
ಶ್ರೀ ಸರೋವರ ಬೆಂಕ್ಕೆರೆ, ಕರ್ನಾಟಕ ಜನಶಕ್ತಿ.
ಡಾ|| ಕಾ.ವೆಂ. ಶ್ರೀನಿವಾಸಮೂರ್ತಿ, ಕವಿಗಳು ಮತ್ತು ಪ್ರಾಧ್ಯಾಪಕರು.
ಶ್ರೀ ಮಾವಳ್ಳಿ ಶಂಕರ್, ಅಧ್ಯಕ್ಷರು, ದಲಿತ ಸಂಘರ್ಷ ಅಂಬೇಡ್ಕರ್ ವಾದ.
ಶ್ರೀ ಶಶಿಕುಮಾರ್, ಕಾರ್ಯದರ್ಶಿ, ಖಾಸಗಿ ಶಾಲೆಗಳ ಒಕ್ಕೂಟ.
ಪ್ರೊ. ಅಬ್ದುಲ್ ರೆಹಮಾನ್ ಪಾಷ,
ಶಿಕ್ಷಣ ವಿಜ್ಞಾನಿಗಳು ಮತ್ತು ಲೇಖಕರು.
ಶ್ರೀ ಜಿಗಣಿ ಶಂಕರ್, ರಾಜ್ಯಾಧ್ಯಕ್ಷರು, ರಿಪಬ್ಲಿಕನ್.
ಶ್ರೀ ಶೃಂಗೇರಿ ಕುಮಾರ್, ಶಿಕ್ಷಣ ತಜ್ಞರು.
ಶ್ರೀ ವ.ಚ.ಚನ್ನೇಗೌಡ, ಗೌರವ ಕಾರ್ಯದರ್ಶಿಗಳು, ಕ.ಸಾ.ಪ.
ಶ್ರೀ ಸಿ.ಕೆ. ರಾಮೇಗೌಡ, ನಿಕಟಪೂರ್ವ ಗೌರವ ಕಾರ್ಯದರ್ಶಿಗಳು, ಕ.ಸಾ.ಪ.
ಶ್ರೀ ಚನ್ನಕೃಷ್ಣ, ಅಧ್ಯಕ್ಷರು,
ಕರ್ನಾಟಕ ಸಮತಾ ಸೈನಿಕ ದಳ.
ಶ್ರೀ ಮೋಹನ್ ರಾಜ್,
ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ಭೀಮವಾದ.
ಶ್ರ.ದೆ. ಪಾರ್ಶ್ವನಾಥ,
ಶ್ರೀಸಾಮಾನ್ಯ ಕೂಟ ಮತ್ತು ಮಾಜಿ ಅಧ್ಯಕ್ಷರು, ಬೆಂಗಳೂರು ನಗರ ಕ.ಸಾ.ಪ
ಶ್ರೀ ವಿ.ಮಂಜುನಾಥ್,
ಖ್ಯಾತ ವಕೀಲರು.
ಶ್ರೀ ಮಾ ಶ್ರೀ ಸಂಪತ್ ಕುಮಾರ್, ಮಾಜಿ ಬಿ.ಬಿ.ಎಂ.ಪಿ ಸದಸ್ಯರು, ವಸಂತ ನಗರ ವಾರ್ಡ್.
ಶ್ರೀ ಸಮೀಹುಲ್ಲಾ ಖಾನ್, 515 ಭೂಸೇನ ಕಾರ್ಯಗಾರ, ಕನ್ನಡ ಸಂಘ.
ಶ್ರೀ ವೀರಸಂಗಯ್ಯ,
ರೈತ ಮುಖಂಡರು ಹಾಗೂ ಇತರರು ಭಾಗವಹಿಸಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಹಲವಾರು ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚೆ, ಸಂವಾದ ನಡೆಸಿ ಅಭಿಪ್ರಾಯವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಘಟಕ, ಹೋರಾಟ ಸಮಿತಿ, ಆಟೋ ಮಿತ್ರ ಮತ್ತು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!