- Advertisement -
- Advertisement -




ಮಂಗಳೂರು: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಆಂಡ್ ಡೈಮಂಡ್ ಹೌಸ್‌ನ ಪಾಲುದಾರರಾದ ದಿ. ಎಂ. ರಘುನಾಥ ಶೇಟ್‌ರವರ ಧರ್ಮಪತ್ನಿ ಶ್ರೀಮತಿ ಪದ್ಮಾ ಆರ್. ಶೇಟ್ (76) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸರಳ ವ್ಯಕ್ತಿತ್ವದಿಂದ ಚಿರಪರಿಚಿತರಾಗಿದ್ದರು. ಇವರು ಖ್ಯಾತ ಉದ್ಯಮಿ ಎಂ. ಪ್ರಶಾಂತ್ ಶೇಟ್, ಎಂ. ಹೇಮಂತ್ ಶೇಟ್, ಎಂ. ನಿಶಾಂತ್ ಶೇಟ್ ಮೂವರು ಪುತ್ರರು ಹಾಗೂ ಪುತ್ರಿ ಶ್ರೀಮತಿ ವೀಣಾ ಡಿ. ಶೇಟ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -








