Tuesday, July 21, 2026
spot_imgspot_img
spot_imgspot_img

ಮಂಗಳೂರು: ಆನ್ ಲೈನ್ ಗೇಮ್ ನಲ್ಲಿ ಸೋಲಿಸಿದ ವಿಚಾರವಾಗಿ ಕೊಲೆಯತ್ನ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ನಗರದ, ಜೆಪ್ಪು ಬಪ್ಪಾಲ್ ನಿವಾಸಿ ಪ್ರತ್ಯುಶ್ ಸಾಲಿಯಾನ್ ರವರು ಸಂಜಯ್ ಪೂಜಾರಿ ಎಂಬುವರನ್ನು Free Fire ಎಂಬ ಮೊಬೈಲ್ ಆನ್ ಲೈನ್ ಗೇಮ್ ನಲ್ಲಿ ಸೋಲಿಸಿದ ವಿಚಾರವಾಗಿ, ಪ್ರತ್ಯುಶ್ ಸಾಲಿಯಾನ್ ಮೇಲೆ ಸಂಜಯ್ ಪೂಜಾರಿ ಗೆ ದ್ವೇಷವಿದ್ದು, ದಿನಾಂಕ 17-05-2023 ರಂದು ಪ್ರತ್ಯುಶ್ ಸಾಲಿಯಾನ್ ರವರು ಮಂಗಳೂರು ನಗರದ ಜೆಪ್ಪು ಬಪ್ಪಾಲ್ ನ ತನ್ನ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ಹೋಗುತ್ತಿದ್ದಾಗ, ಸಂಜಯ್ ಪೂಜಾರಿ ಪ್ರತ್ಯುಶ್ ಸಾಲಿಯಾನ್ ರವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಚೂರಿಯಿಂದ ಕೊಲೆಯತ್ನ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ PSI ಶೀತಲ್ ಅಲಗೂರು ರವರು ತನಿಖೆ ನಡೆಸಿದ್ದು, PSI ಮನೋಹರ್ ಪ್ರಸಾದ್ ಪಿ ರವರು ತನಿಖೆ ಪೂರ್ಣಗೊಳಿಸಿ ಆರೋಪಿತನ ಮೇಲೆ ಕಲಂ 341, 325, 324, 326, 307, 504, 506 ಐಪಿಸಿಯಂತೆ ದೋಷಾರೋಪಣ ಪತ್ರವನ್ನು ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತಾರೆ. ಈ ಪ್ರಕರಣವು ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿ ವಿಚಾರಣೆ ನಡೆದು, ಸರಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ನಾಯಕ್ ರವರು ವಿಚಾರಣೆಯ ಸಮಯ ಸರಕಾರದ ಪರವಾಗಿ ವಾದ ಮಂಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿ ಸಂಜಯ್ ಪೂಜಾರಿ ರವರಿಗೆ ಜ. 31 ರಂದು 4 ವರ್ಷ ಜೈಲು ಶಿಕ್ಷೆ ಹಾಗೂ 20,500/- ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುತ್ತದೆ.

- Advertisement -

Related news

error: Content is protected !!