Wednesday, October 21, 2026
spot_imgspot_img
spot_imgspot_img

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ 11 ನೇ ವರ್ಷದ ಸಂಭ್ರಮಾಚರಣೆ

- Advertisement -
- Advertisement -

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ 11 ನೇ ವರ್ಷದ ಸಂಭ್ರಮಾಚರಣೆಯು ಫೆಬ್ರವರಿ 1 ನೇ ಭಾನುವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ನಡೆಯಿತು.

ಸಂಜೆ ಗಂಟೆ 8 ಕ್ಕೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕೇಸರಿ ಸಂಘದ ಅಧ್ಯಕ್ಷರಾದ ಶ್ರೀ ವನೀತ್ ಡೆಪ್ಪಿನಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೋಡಿಬಾಂಡಿ, ಯುವಕೇಸರಿ ಸಂಘದ ಗೌರವಾಧ್ಯಕ್ಷರಾದ ಭಾರತೀಯ ಜನತಾ ಪಾರ್ಟಿಯ ಪುತ್ತೂರು ಮಂಡಲ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು, SLV ಗ್ರೂಪ್ ಮೈಸೂರು ಇದರ ಮಾಲಕರಾದ ಶ್ರೀ ದಿವಾಕರ್ ದಾಸ್ ನೆರ್ಲಾಜೆ, ದಿಗ್ವಿಜಯ ಗ್ರೂಪ್ ನ ಶ್ರೀ ದಿನಕರ ಭಟ್ ಮಾವೆ, ಉದ್ಯಮಿಗಳಾದ ಶ್ರೀ ಬಾಬು ಕೊಪ್ಪಳ , ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಮತಿ‌ ರಕ್ಷಿತಾ ಸನತ್ ಸಾಲಿಯಾನ್ ‌ ಚಂದಳಿಕೆ, ಒಜಾಳ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ನೇತ್ರವಾತಿ ನಿಡ್ಯ, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಮಾ ದೇಜಪ್ಪ ಪೂಜಾರಿ, ಯುವಕೇಸರಿಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಬಾಲಕೃಷ್ಣ ಪೂಜಾರಿ ಪಟ್ಲ ಭಾಗವಹಿಸಿದರು.

ಅಲ್ಲದೇ ಸೇವಾ ಕಾರ್ಯದಲ್ಲಿ ಸಾಧನೆ ಮಾಡಿದ ಧನಂಜಯ ವಿಟ್ಲ, ರಾಷ್ಟ್ರೀಯ ಈಜು ಪಟು ಶ್ರೀ ಲಕ್ಷ್ಮೀ ಗಾಣಿಗ ವಿಟ್ಲ ಮತ್ತು ರಾಷ್ಟ್ರೀಯ ಕಬ್ಬಡಿ ಕ್ರೀಡಾ ಪಟು ತೀರ್ಥಶ್ ವಿಟ್ಲ ಇವರುಗಳನ್ನು ಸನ್ಮಾನಿಸಲಾಯಿತು…

ವಿಟ್ಲ ಕಬ್ಬಿಣಹಿತ್ಲು ನಿವಾಸಿ ನವೀನ್ ಜೋಗಿ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10,000 ರೂ ಮೌಲ್ಯದ ಚೆಕ್ಕು ಮತ್ತು ದೈನಂದಿನ ಖರ್ಚಿಗಾಗಿ 50 ಕೆಜಿ ಅಕ್ಕಿಯನ್ನು‌ ವಿತರಣೆ‌ ಮಾಡಲಾಯಿತು.ಚಂದಳಿಕೆ ಶಾಲಾಭಿವೃದ್ಧಿ ಸಮಿತಿಗೆ 6000 ರೂಗಳನ್ನು ನೀಡಲಾಯಿತು. ಕಳೆದ 11ವರ್ಷಗಳ ಹಿಂದೆ ಸಂಘಟನೆಯು ಆರಂಭಗೊಂಡು ಕಳೆದ 7 ವರ್ಷಗಳಿಂದ ದತ್ತಿನಿಧಿ ಯೋಜನೆಯಡಿಯಲ್ಲಿ ಬಡವರ್ಗದ ಅನಾರೋಗ್ಯ ಪೀಡಿತರಿಗೆ ಒಟ್ಟು 9,56,530 ಧನ ಸಹಾಯ ಮತ್ತು 2384 ಕೆ. ಜಿ ಅಕ್ಕಿಯನ್ನು ವಿತರಣೆ ಮಾಡಲಾಯಿತೆಂದು ಸಂಘದ ಪ್ರಧಾನ ಸಂಚಾಲಕ ಶ್ರೀ ಸುಶಾಂತ್ ಸಾಲಿಯಾನ್ ಚಂದಳಿಕೆ ವರದಿ ವಾಚಿಸಿದರು.

ಯುವಕೇಸರಿಯ ಗೌರವ ಸಲಹೆಗಾರದ ಶ್ರೀ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಸ್ವಾಗತಿಸಿ, ಸಂಚಾಲಕರಾದ ಶ್ರೀ ದಿವಾಕರ ಶೆಟ್ಟಿ ಅಬೀರಿ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಶ್ರೀ ಗಣೇಶ್ ಅಬೀರಿ ಸಹಕರಿಸಿದರು.ಶ್ರೀ ಹರೀಶ ಪೂಜಾರಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ “ಸ್ವಾಮಿ ಭಕ್ತೆ ಮಂಜಣ್ಣೆ” ತುಳು ಯಕ್ಷಗಾನ ನಡೆಯಿತು. ಅತಿಥಿ ಭಾಗವತರಾಗಿ ಶ್ರೀಮತಿ ಕಾವ್ಯಶ್ರೀ ಅಜೇರು ಭಾಗವಹಿಸಿದರು.

- Advertisement -

Related news

error: Content is protected !!