- Advertisement -
- Advertisement -



ವಿಟ್ಲ: ಕೋಡಪದವು ಗ್ರಾಮದ ಹಿರಿಯ ಕೃಷಿಕ ಹಾಗೂ ಆವಿಷ್ಕಾರಕ ಮಹಾಬಲೇಶ್ವರ ಭಟ್ (ಗಿರಿ) (70) ಇಂದು ನಿಧನರಾದರು.
ರಾಜ್ಯ ಸರ್ಕಾರದಿಂದ ಕೃಷಿ ಪಂಡಿತ ಪ್ರಶಸ್ತಿ ಪಡೆದಿದ್ದ ಅವರು ಕೃಷಿ ಕ್ಷೇತ್ರದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಹೆಸರಾಗಿದ್ದರು. ವಿಶೇಷವಾಗಿ ಕಾಳುಮೆಣಸು ಬಿಡಿಸುವ ಯಂತ್ರವನ್ನು ಮೊದಲಾಗಿ ಕಂಡುಹಿಡಿದವರು ಎಂಬ ಖ್ಯಾತಿ ಪಡೆದಿದ್ದರು.ಅಲ್ಲದೆ ಕೃಷಿಗೆ ಉಪಯುಕ್ತವಾಗುವ ಹಲವು ಯಂತ್ರಗಳನ್ನು ಸ್ವತಃ ಅಭಿವೃದ್ಧಿಪಡಿಸಿದ್ದರು.
ಉಚಿತವಾಗಿ ಜ್ಯೋತಿಷ್ಯ ಸೇವೆ ಸಲ್ಲಿಸುತ್ತಿದ್ದ ಅವರು ಕೋಡಪದವು ಶ್ರೀ ವೀರಾಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಕಂಡುಹಿಡಿದವರಲ್ಲಿ ಮುಂಚೂಣಿಯಲ್ಲಿದ್ದವರು .
ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ
- Advertisement -








