




ಇಡ್ಕಿದು ಸೇವಾ ಸಹಕಾರಿ ಸಂಘ ನಿ. 3628 ಇದರ ಆರೋಗ್ಯಾಮೃತ ಯೋಜನೆ ಜನಸೇವಾ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಕಬಕ ಅಡ್ಯಾಲುಕರೆ ಶಾಖೆಯ ‘ಪಂಚಾಮೃತ ಸಭಾಭವನ’ದಲ್ಲಿ ನಡೆಯಿತು.


ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಸುಧಾಕರ್ ಶೆಟ್ಟಿ ಬೀಡಿನಮಜಲು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪುತ್ತೂರು ಆದರ್ಶ ಆಸ್ಪತ್ರೆಯ ಖ್ಯಾತ ಸರ್ಜನ್ ಡಾ. ಎಂ. ಕೆ. ಪ್ರಸಾದ್ , ಹಾಗೂ ಪುತ್ತೂರಿನ ಹೃದ್ರೋಗ ತಜ್ಞರು ಡಾ. ಸುರೇಶ್ ಪುತ್ತೂರಾಯರವರು ದೀಪ ಬೆಳಗಿಸಿದ ಉದ್ಘಾಟಿಸಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ರಾಮ್ ಭಟ್ ನೀರಪಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ಹಾಗೂ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ನೀಡಲಿರುವ ಸಾಮಾನ್ಯ ರೋಗ ಮತ್ತು ತುರ್ತು ಚಿಕಿತ್ಸಾ ತಜ್ಞರು ಡಾ. ಜಯಪ್ರಕಾಶ್ ಕೊಂಕೋಡಿ(MBBS, MD, DM), ಸುರೇಶ್ ಪ್ರಚಾರಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಸಿಬ್ಬಂಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇಡ್ಕಿದು ಸೇವಾ ಸಹಕಾರಿ ಸಂಘ ಅಡ್ಯಾಲುಕರೆ ಶಾಖೆ ಕಬಕದಲ್ಲಿ ಪ್ರತೀ ಗುರುವಾರ ಮಧ್ಯಾಹ್ನ ನಂತರ 3 ರಿಂದ ಸಂಜೆ 5 ರ ವರೆಗೆ ವೈದ್ಯರ ಸೇವೆ ಲಭ್ಯವಿದೆ. ಸಂದರ್ಶನ ಶುಲ್ಕ 10/- ಆಗಿರುತ್ತದೆ.
ಸೇವೆಗಳು:
- ಸಕ್ಕರೆ ಕಾಯಿಲೆ, ರಕ್ತದೊತ್ತಡ ಇತ್ಯಾದಿ ಸಾಮಾನ್ಯ ಕಾಯಿಲೆಗಳ ಸಮಾಲೋಚನೆ
- ಕ್ಲಿಷ್ಟಕರವಾದ ಬಹು ಅಂಗಾಂಶಗಳ ಸಂಕೀರ್ಣ ಕಾಯಿಲೆಗಳ ಸಮಾಲೋಚನೆ
- ಜನೌಷಧಿಯನ್ನು ಒಳಗೊಂಡ ಸಲಹೆಗಳು
ರೋಗಿಗಳು ಜನ ಸೇವಾ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ ತಿಳಿಸಿದರೆ ಸೇವೆ ಕೊಡಲು ಸುಲಭ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+919867768221
+91 944 981 8221
www.hitaayu.com








