Wednesday, July 29, 2026
spot_imgspot_img
spot_imgspot_img

ರಜಾ ಕಾಲದ ನ್ಯಾಯಧೀಶರ ನೇಮಕಕ್ಕೆ ರಾಜ್ಯ ಹೈ ಕೋರ್ಟ್ ಅಧಿಸೂಚನೆ

- Advertisement -
- Advertisement -

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಯ ಸಿವಿಲ್ ನ್ಯಾಯಾಲಯಗಳಿಗೆ ಡಿಸೆಂಬರ್ 24, 2020ರಂದು ಚಳಿಗಾಲದ ರಜೆ ಆರಂಭವಾಗಲಿದ್ದು ಜನವರಿ 1, 2021ರಂದು ಕೊನೆಗೊಳ್ಳಲಿದೆ.

ಹೈಕೋರ್ಟ್ ಅಧಿಸೂಚನೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ರಜಾಕಾಲದ ನ್ಯಾಯಾಧೀಶರಾಗಿ ಮ೦ಗಳೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ದಿನಾಂಕ 24.12.2020 ರಿಂದ 27.12.2020 ರ ವರೆಗೆ ಕಾಯ೯ನಿವ೯ಹಿಸಲಿದ್ದಾರೆ. ದಿನಾಂಕ 28.12.2020 ರಿಂದ 1.1.2021 ರ ವರೆಗೆ ಮಗಳೂರಿನ 4 ನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ರಜಾಕಾಲೀನ ನ್ಯಾಯಾಧೀಶರಾಗಿ ಕಾಯ೯ ನಿವ೯ಹಿಸಲಿದ್ದಾರೆ.

ಮಂಗಳೂರಿನ ಜಿಲ್ಲಾ ಕೇಂದ್ರದಲ್ಲಿ 6 ಜಿಲ್ಲಾ ನ್ಯಾಯಾಲಯಗಳು: 2 ಕೌಟುಂಬಿಕ ನ್ಯಾಯಾಲಯಗಳು; 1 ಕಾರ್ಮಿಕ ನ್ಯಾಯಾಲಯ; 1 ಪೋಕ್ಸೋ ವಿಶೇಷ ನ್ಯಾಯಾಲಯ; 4 ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳು; 6 ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳು; 8 ಜೆ.ಎಮ್.ಎಫ್‌. ಸಿ. ನ್ಯಾಯಾಲಯಗಳು ಇತ್ಯಾದಿ ಒಟ್ಟು 28 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಬಂಟ್ವಾಳ ಪುತ್ತೂರು ಬೆಳ್ತಂಗಡಿ ಸುಳ್ಯ ಮೂಡುಬಿದರೆ ತಾಲ್ಲೂಕುಗಳಲ್ಲಿ ಒಟ್ಟು 14 ನ್ಯಾಯಾಲಯಗಳು ಕಾಯ೯ನಿವ೯ಹಿಸುತ್ತಿವೆ.

ರಜಾ ಅವಧಿಯಲ್ಲಿ ಸಿವಿಲ್ ವಿವಾದಗಳಿಗೆ ಸಂಬಂಧಪಟ್ಟಂತೆ ಮಧ್ಯಂತರ ಆದೇಶ; ಜಪ್ತಿ ಆದೇಶ; ನಿರ್ಬಂಧಕಾಜ್ಞೆ; ಪ್ರಕರಣದ ನಡವಳಿಗೆ ತಡೆಯಾಜ್ಞೆ ಇತ್ಯಾದಿ ತುರ್ತು ಆದೇಶಗಳನ್ನು ರಜಾಕಾಲೀನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪಡೆಯಬಹುದಾಗಿದೆ.

ಚಳಿಗಾಲದ ರಜಾ ಅವಧಿಯಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಮತ್ತು ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗಳು (MACT) ಎಂದಿನಂತೆ ಕಾರ್ಯನಿರ್ವಹಿಸಲಿವೆ.

- Advertisement -

Related news

error: Content is protected !!