- Advertisement -
- Advertisement -





ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದ ಹೊಸೂರಿನಲ್ಲಿರುವ ಹೋಟೆಲ್‌ವೊಂದು ಭರ್ಜರಿ ಆಫರ್ ನೀಡಿದ್ದು, ಒಂದು ಸಿಲಿಂಡರ್ ಕೊಟ್ಟರೆ ದಿನಕ್ಕೆ ಒಂದು ಬಿರಿಯಾನಿಯಂತೆ ಒಂದು ತಿಂಗಳುಗಳ ಕಾಲ ಉಚಿತವಾಗಿ ಕೊಡುವುದಾಗಿ ತಿಳಿಸಿದೆ.
’ನಮಗೆ ಅಡುಗೆಗೆ ನೀವು ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ’ ಎಂದು ಟ್ಯಾಗ್ ಕೂಡ ಹಾಕಿಕೊಂಡಿದೆ. ವಿಶಿಷ್ಟ ಜಾಹೀರಾತಿನ ಮೂಲಕ ಆಫರ್ ನೀಡಿದ್ದು, ಹೋಟೆಲ್ ಮುಂದೆ ಪೋಸ್ಟರ್ ಹಾಕಿ ಮಾಲೀಕರು ಗ್ರಾಹಕರ ಗಮನ ಸೆಳೆದಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆ ಉಂಟಾಗಿದೆ. ಈ ಸವಾಲನ್ನು ಎದುರಿಸಲು ಹೊಸೂರಿನ ಹೋಟೆಲ್‌ವೊಂದು ಈ ಉಪಾಯ ಕಂಡುಕೊಂಡಿದೆ.
- Advertisement -








